ನೈಟ್ ಕರ್ಫ್ಯೂ | ಯಾವುದೇ ಪಾಸ್ ಕೊಡಲ್ಲ.. ಸುಮ್ ಸುಮ್ಮನೆ ಓಡಾಡಿದ್ರೆ ಕ್ರಮ Night Curfew saaksha tv
ಬೆಂಗಳೂರು : ನ್ಯೂ ಇಯರ್ ದಿನ ಇನ್ನೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ತಿಳಿಸಿದ್ದಾರೆ.
ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ಈ ಬಗ್ಗೆ ಕಮಲ್ ಪಂತ್ ಮಾಹಿತಿ ನೀಡಿದರು.
ನ್ಯೂಇಯರ್ ದಿನ ಪಬ್, ಬಾರ್ ರೆಸ್ಟೋರೆಂಟ್ ಹತ್ತು ಗಂಟೆಗೆ ಕ್ಲೋಸ್ ಮಾಡಬೇಕು.
ಎಮರ್ಜೆನ್ಸಿ ಕೆಲಸ ಇರುವವರು ಬಿಟ್ರೆ ಬೇರೆ ಯಾರು ಹೊರ ಬರೋದಕ್ಕೆ ಬಿಡಲ್ಲ. ಜನ ಅದನ್ನ ಪಾಲಿಸಬೇಕು, ಉಲ್ಲಂಘನೆ ಮಾಡಬಾರದು ಎಂದು ಮನವಿ ಮಾಡಿಕೊಂಡರು.
ಇನ್ನು ನೈಟ್ ಪ್ಯಾಟ್ರೋಲಿಂಗ್ ಇರುತ್ತೆ. ಸುಮ್ಮನೆ ಓಡಾಡಿದ್ರೆ, ವಶಕ್ಕೆ ಪಡೆಯುತ್ತೇವೆ. ಯಾವುದೇ ಪಾಸ್ ಕೊಡಲ್ಲ. ಸೂಕ್ತ ದಾಖಲೆ ಕೊಟ್ಟು ಓಡಾಡಬಹುದು.
ನ್ಯೂ ಇಯರ್ ಗೆ ಪಬ್ಲಿಕ್ ಪ್ಲೇಸ್ ನಲ್ಲಿ ಜನ ಸೇರೋವಂತಿಲ್ಲ. ಎಲ್ಲ ಕಡೆ ಸಿಸಿಟಿವಿ ಹಾಕ್ತೀವಿ.
ಹೊಟೇಲ್ ರೆಸ್ಟೋರೆಂಟ್ ಗೆ 50 ಪರ್ಸೆಂಟ್ ಅವಕಾಶ ಇದೆ. ಅವರು ಹತ್ತು ಗಂಟೆಗೆ ಕ್ಲೋಸ್ ಮಾಡಬೇಕು.
ಅವರ ಟೀಕೆ ಟಿಪ್ಪಣಿ ಇದ್ರೆ ಸರ್ಕಾರದ ಮಟ್ಟದಲ್ಲಿ ಮಾಡಲಿ. ಸರ್ಕಾರಿ ಆದೇಶವನ್ನ ನಾವು ಪಾಲನೆ ಮಾಡುತ್ತೇವೆ.
ಕೊವೀಡ್ ನಿಯಮಗಳ ಅನ್ವಯ ಜನ ಎಲ್ಲಿಯೂ ಸೇರಬಾರದು, ಸುರಕ್ಷತೆ ದೃಷ್ಟಿಯಿಂದ ಕ್ರಮ ಕೈಗೊಳ್ಳತ್ತೇವೆ ಎಂದು ಕಮಲ್ ಪಂತ್ ತಿಳಿಸಿದರು.