ನೈಟ್ ಕಫ್ರ್ಯೂ ಕ್ಯಾನ್ಸಲ್ : ಸಿಎಂ ಸಾಹೇಬ್ರೇ ಇದೇನಿದು..?
ಬೆಂಗಳೂರು : ಯಾಕೋ ಪಾಪ ರಾಜ್ಯ ಬಿಜೆಪಿ ಸರ್ಕಾರ ತುಂಬಾ ಗೊಂದಲಮಯವಾಗಿ ವರ್ತನೆ ಮಾಡುತ್ತಿದೆ. ಬ್ರಿಟನ್ ನಲ್ಲಿ ಕೊರೊನಾ ರೂಪಾಂತರ ವೈರಸ್ ಕಾಣಿಕೊಂಡ ಹಿನ್ನೆಲೆ ನಿನ್ನೆ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪನವರು ಇಂದಿನ ನೈಟ್ ಕಫ್ರ್ಯೂ ಜಾರಿಯಲ್ಲಿರುತ್ತೆ ಅಂತ ಘೋಷಣೆ ಮಾಡಿದ್ರು. ಸಂಜೆ ವೇಳೆ ಯಾರದ್ದೋ ಒತ್ತಡಕ್ಕೆ ಮಣಿದಂತೆ ಇಂದಿನಿಂದಲ್ಲ ನಾಳೆಯಿಂದ ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಕಫ್ರ್ಯೂ ಇರಲಿದೆ ಅಂತಾ ಮಾರ್ಗಸೂಚಿ ಬಿಡುಗಡೆ ಮಾಡಿದರು. ಇದಕ್ಕೆ ಎಲ್ಲ ರೀತಿಯಲ್ಲೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. ಆದ್ರೆ ಇದೀಗ ಸಿಎಂ ಸಾಹೇಬ್ರು ಸಡನ್ ಆಗಿ ತಮ್ಮ ಆದೇಶವನ್ನ ವಾಪಸ್ ಪಡೆದಿದ್ದಾರೆ. ಅಂದ್ರೆ ಘನತೆಹೊತ್ತ ಮುಖ್ಯಮಂತ್ರಿಗಳು ರಾಜ್ಯದಾದ್ಯಂತ ನೈಟ್ ಕಫ್ರ್ಯೂವನ್ನ ಕಾನ್ಸಲ್ ಮಾಡಿದ್ದಾರೆ.
ಊಸರವಳ್ಳಿಗಳ ನಿಜ ಬಣ್ಣ ಬೇರೆ ಬೇರೆ ಎಂದ ಕರೋನಾಗೆ ಕೃತಜ್ಞರಾಗಿರದಿದ್ದರೇ ಹೇಗೆ?
ಈ ಕುರಿತು ಪ್ರಕಟಣೆ ಹೊರಡಿಸಿರುವ ಸಿಎಂ, ಬ್ರಿಟನ್ ದೇಶದಲ್ಲಿ ಪತ್ತೆಯಾದ ರೂಪಾಂತರ ಕೊರೊನಾ ವೈರಸ್ ಹರಡುವಿಕೆ ತಡೆಯೋ ದೃಷ್ಟಿಯಿಂದ ತಜ್ಞರ ಸಲಹೆ ಪಡೆದು ರಾತ್ರಿ ಕಫ್ರ್ಯೂ ಜಾರಿ ಮಾಡಿದ್ವಿ. ಆದ್ರೆ ಸರ್ಕಾರದ ಈ ತೀರ್ಮಾನದ ಕುರಿತಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕಫ್ರ್ಯೂ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆ ಮರುಪರಿಶೀಲಸಿ, ಸಂಪುಟ ಸಹೋದ್ಯೋಗಿಗಳ, ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕಫ್ರ್ಯೂ ಹಿಂಪಡೆಯಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರು ಸ್ವಯಂ ನಿಭರ್ಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳ ಈ ದಿಢೀರ್ ನಿರ್ಧಾರದಿಂದ ಜನ ಕೊಂಚ ಗೊಂದಲದಲ್ಲಿದ್ರೂ, ಸಿಎಂ ಸಾಹೇಬ್ರೇ ಇದೇನಿದು ಅಂತಾ ಪ್ರಶ್ನೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel