ರಾತ್ರಿ ಕಾವಲುಗಾರ ಐಐಎಂನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದ ಯಶೋಗಾಥೆ

1 min read
Night watchman turns IIM Assistant Professor

ರಾತ್ರಿ ಕಾವಲುಗಾರ ಐಐಎಂನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದ ಯಶೋಗಾಥೆ

ತಿರುವನಂತಪುರಂ : 28 ವರ್ಷದ ರಂಜಿತ್ ರಾಮಚಂದ್ರನ್ ಅವರ ಜೀವನಗಾಥೆಯು ಅನೇಕ ವಿಧಗಳಲ್ಲಿ ಇತರರಿಗೆ ಪ್ರೇರಣೆಯಾಗಿದೆ. ಅನೇಕರಿಗೆ ತಮ್ಮ ಜೀವನದಲ್ಲಿ ಪ್ರತಿಕೂಲ ಸಂದರ್ಭಗಳ ವಿರುದ್ಧ ಹೋರಾಡಲು ಸ್ಫೂರ್ತಿಯಾಗಿದೆ. ರಾತ್ರಿ ಕಾವಲುಗಾರನಾಗಿದ್ದ ರಾಮಚಂದ್ರನ್ ಈಗ ಐಐಟಿಯ ಪದವಿ ಪಡೆದು ರಾಂಚಿಯ ಐಐಎಂನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡಿದ್ದಾರೆ

ರಾಮಚಂದ್ರನ್ ಅವರು ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಅಪ್‌ಲೋಡ್ ಮಾಡಿದ್ದು, ಅದರಲ್ಲಿ ಐಐಎಂ ಪ್ರಾಧ್ಯಾಪಕರೊಬ್ಬರು ಇಲ್ಲಿ ಜನಿಸಿದರು ಎಂಬ ಶೀರ್ಷಿಕೆಯ ಜೊತೆಗೆ ಮಳೆನೀರು ಬೀಳುವುದನ್ನು ತಡೆಯಲು ಟಾರ್ಪಾಲಿನ್ ಹಾಳೆಯಿಂದ ಮುಚ್ಚಿದ ಶಿಥಿಲವಾದ ಹೆಂಚಿನ ಗುಡಿಸಲಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು ಫೇಸ್‌ಬುಕ್‌ನಲ್ಲಿ 37,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.
Night watchman turns IIM Assistant Professor

ರಾಮಚಂದ್ರನ್ ಅವರು ಕಾಸರಗೋಡಿನ ಪಾಣತ್ತೂರಿನಲ್ಲಿ ಬಿಎಸ್ಎನ್ಎಲ್ ದೂರವಾಣಿ ವಿನಿಮಯ ಕೇಂದ್ರದಲ್ಲಿ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದರು, ಆದರೆ ಅವರು ಕಾವಲು ಕಾಯುವ ಕೆಲಸ ಮಾಡುವ ಜೊತೆಗೆ ಜಿಲ್ಲೆಯ ಸೇಂಟ್ ಪಿಯಸ್ ಕಾಲೇಜಿನಿಂದ ಅರ್ಥಶಾಸ್ತ್ರ ಪದವಿ ಪಡೆದರು. ಅವರು ಏಪ್ರಿಲ್ 9 ರಂದು ಫೇಸ್‌ಬುಕ್ ಪೋಸ್ಟ್ ಮೂಲಕ ತಮ್ಮ ಕಥೆಯನ್ನು ಹಂಚಿಕೊಂಡಿದ್ದು, ಇದು ಸಾಕಷ್ಟು ಸಂಚಲನವನ್ನುಂಟು ಮಾಡಿದೆ.

ಹಗಲಿನಲ್ಲಿ ಕಾಲೇಜು, ರಾತ್ರಿಯಲ್ಲಿ ಕೆಲಸ

ರಂಜಿತ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಕಡಿಮೆ ಆದಾಯದ ಹಿನ್ನೆಲೆಯಿಂದ ಬಂದಿದ್ದರಿಂದ ತಮ್ಮ ಕಾಲೇಜು ಮತ್ತು ಕೆಲಸವನ್ನು ಒಟ್ಟಿಗೆ ನಿರ್ವಹಿಸುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ಹಗಲಿನ ವೇಳೆಯಲ್ಲಿ ಕಾಲೇಜಿಗೆ ಹೋಗುತ್ತಿದ್ದೆ ಮತ್ತು ರಾತ್ರಿಯಲ್ಲಿ ದೂರವಾಣಿ ವಿನಿಮಯ ಕೇಂದ್ರದಲ್ಲಿ ಕೆಲಸ ಮಾಡಿದ್ದೇನೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಅದೃಷ್ಟದಿಂದಾಗಿ, ನನಗೆ ಪಾಣತ್ತೂರಿನ ಟೆಲಿಫೋನ್ ಎಕ್ಸ್‌ಚೇಂಜ್‌ನಲ್ಲಿ ರಾತ್ರಿ ಭದ್ರತಾ ಅಧಿಕಾರಿಯಾಗಿ ಕೆಲಸ ಸಿಕ್ಕಿತು. ಹಗಲಿನ ವೇಳೆಯಲ್ಲಿ, ನಾನು ಅಧ್ಯಯನ ಮಾಡುತ್ತಿದ್ದೆ. ನಾನು ಒಮ್ಮೆ ಸೋತಿದ್ದೇನೆ ಎಂದು ಭಾವಿಸಿದ ಶೈಕ್ಷಣಿಕ ವೃತ್ತಿಜೀವನಕ್ಕೆ ಇದರಿಂದಾಗಿ ಬಾಗಿಲು ತೆರೆಯಿತು ಎಂದು ಅವರು ಹೇಳಿದ್ದಾರೆ.

ಪದವಿ ಪಡೆದ ಬಳಿಕ ಅವರು ಮದ್ರಾಸ್‌ನ ಐಐಟಿಗೆ ಸೇರಿದರು. ಅಲ್ಲಿ ಅವರಿಗೆ ಮಲಯಾಳಂ ಮಾತ್ರ ತಿಳಿದಿದ್ದರಿಂದ ಅಧ್ಯಯನ ಮಾಡಲು ಕಷ್ಟವಾಯಿತು. ನಿರಾಶೆಗೊಂಡ ಅವರು ಪಿಎಚ್‌ಡಿ ಕಾರ್ಯಕ್ರಮವನ್ನು ತ್ಯಜಿಸಲು ನಿರ್ಧರಿಸಿದರು. ಆದರೆ ಅವರ ಮಾರ್ಗದರ್ಶಿ ಡಾ. ಸುಭಾಷ್ ಅವರು ಹಾಗೆ ಮಾಡದಂತೆ ಮನವೊಲಿಸಿದರು. ಅವರ ಸಹಕಾರದಿಂದ ‌ಅಧ್ಯಯನವನ್ನು ಮುಂದುವರಿಸಿ ರಂಜಿತ್ ರಾಮಚಂದ್ರನ್ ಕಳೆದ ವರ್ಷ ಡಾಕ್ಟರೇಟ್ ಪದವಿಯನ್ನು ಪಡೆದರು.
Night watchman turns IIM Assistant Professor

ಈ ಪೋಸ್ಟ್ ವೈರಲ್ ಆಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನನ್ನ ಜೀವನ ಕಥೆ ಇನ್ನೂ ಕೆಲವರಿಗೆ ಸ್ಫೂರ್ತಿ ನೀಡುತ್ತದೆ ಎಂದು ಆಶಿಸಿ ಪೋಸ್ಟ್ ಮಾಡಿದೆ. ಪ್ರತಿಯೊಬ್ಬರೂ ಒಳ್ಳೆಯ ಕನಸು ಕಾಣಬೇಕು ಮತ್ತು ಅವರ ಕನಸುಗಳಿಗಾಗಿ ಹೋರಾಡಬೇಕೆಂದು ಎಂದು ನಾನು ಬಯಸುತ್ತೇನೆ. ಇತರ ಜನರು ಇದರಿಂದ ಪ್ರೇರಿತರಾಗಿ ಯಶಸ್ಸನ್ನು ಕಂಡುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟಗಳು ಮತ್ತು ಶಿಕ್ಷಣ

ರಾಮಚಂದ್ರನ್ ಅವರು ಆರ್ಥಿಕ ಸಂಕಷ್ಟಗಳಿಂದಾಗಿ ತಮ್ಮ ಶಾಲಾ ಶಿಕ್ಷಣವನ್ನು ತ್ಯಜಿಸಿದ್ದರು. ಅವರ ತಂದೆ ದರ್ಜಿ ಮತ್ತು ಅವರ ತಾಯಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ.

ಅವರು ‌ಇದನ್ನೇ ಮಾಡಬೇಕೆಂದು ಅವರ ಹೆತ್ತವರು ಎಂದಿಗೂ ಒತ್ತಾಯಿಸಲಿಲ್ಲ. ಮೇಲಾಗಿ, ಆ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಯಾರೊಬ್ಬರೂ ಇರಲಿಲ್ಲ. ಸೇಂಟ್ ಪಿಯಸ್ ಕಾಲೇಜು ನನಗೆ ವೇದಿಕೆಯಲ್ಲಿ ಮಾತನಾಡಲು ಕಲಿಸಿತು. ಕೇರಳದ ಕೇಂದ್ರ ವಿಶ್ವವಿದ್ಯಾಲಯವು ಕಾಸರಗೋಡಿನ ಹೊರಗಿನ ಜಗತ್ತಿಗೆ ಅವಕಾಶಗಳನ್ನು ತೆರೆಯಿತು ಎಂದು ಅವರು ಹೇಳಿದರು.

#Nightwatchman #IIM #AssistantProfessor

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd