ಬೆಂಗಳೂರು, ಮೇ 29 : ಇಷ್ಟು ದಿನ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಈಗ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಹಾಕಿರುವ ನಿಖಿಲ್, ಜನರ ಜೊತೆ ನಿಂತರ ಸಂಪರ್ಕದಲ್ಲಿರಲು ವೈಯಕ್ತಿಕ ಟ್ವಿಟ್ಟರ್ ಖಾತೆ ತೆರೆದಿದ್ದೇನೆ ಎಂದು ಹೇಳಿದ್ದಾರೆ.
“ಇನ್ನು ಮುಂದೆ ನಿಮ್ಮೆಲ್ಲರ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಲು ವೈಯಕ್ತಿಕ ಟ್ವಿಟ್ಟರ್ ಖಾತೆಗೆ ಚಾಲನೆ ನೀಡಿದ್ದು ನನ್ನ ಅಭಿಪ್ರಾಯಗಳನ್ನು ಟ್ವಿಟ್ಟರ್ ಮೂಲಕವೂ ಹಂಚಿಕೊಳ್ಳಲಿದ್ದೇನೆ”.
“ಸಮಾಜಮುಖಿಯಾಗಿರುವ ಆರೋಗ್ಯಪೂರ್ಣ ಚರ್ಚೆಯಲ್ಲಿ ಪಾಲ್ಗೊಳ್ಳೋಣ” ಎಂದು ನಿಖಿಲ್ ಬರೆದುಕೊಂಡಿದ್ದಾರೆ.
@Nikhil_Kumar_k ಹೆಸರಿನಲ್ಲಿ ನಿಖಿಲ್ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದು, 13 ಜನರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯ ಈ ಖಾತೆಗೆ 2682 ಜನ ಹಿಂಬಾಲಕರಿದ್ದಾರೆ.








