Nikhil | ಹೆಣ್ಣು ಮಕ್ಕಳ ಮೇಲೆ ಗೌರವ ಇದೆ, ಅಡ್ವಾಂಟೆಜ್ ತಗೋಬೇಡಿ
ಮಂಡ್ಯ : ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ, ಅಡ್ವಾಂಟೆಜ್ ತಗೋಬೇಡಿ, ಉತ್ತರ ಕೊಡುವ ದಿನಗಳು ಬಹಳ ದೂರವಿಲ್ಲ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಶಾಸಕರ ಮೇಲೆ ಸಂಸದೆ ಸುಮಲತಾ ವಾಗ್ದಾಳಿ ವಿಚಾರವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಂಸದರು ನಮ್ಮ ಶಾಸಕರ ವಿರುದ್ಧ ಕಿಡಿ ಅಚ್ಚುವ ಕೆಲಸ ಮಾಡ್ತಿದ್ದಾರೆ. ಪ್ರತಿ ಸಂದರ್ಭದಲ್ಲಿಯು ನಮ್ಮ ಶಾಸಕರ ಮೇಲೆ ಕೆಸರು ಏರಚುವ ಕೆಲಸ ಮಾಡಬೇಡಿ. ಕೆಲಸದ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿ ಎಂದು ಹೇಳಿದ್ದಾರೆ.
ಹೆಣ್ಣು ಮಕ್ಕಳ ಮೇಲೆ ಗೌರವ ಇದೆ, ಅಡ್ವಾಂಟೆಜ್ ತಗೋಬೇಡಿ, ನಾನು ಸಂಸದರ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಉತ್ತರ ಕೊಡುವ ದಿನಗಳು ಬಹಳ ದೂರವಿಲ್ಲ. ಅದನ್ನ ನಾವು ರಾಜಕೀಯವಾಗಿ ಎದುರಿಸುತ್ತೇವೆ. ನಾಲ್ಕೈದು ತಿಂಗಳ ಹಿಂದೆ ಮದ್ದೂರಿಗೆ ಹೋದ ಸಂದರ್ಭದಲ್ಲಿ ಡಿಸಿ ತಮ್ಮಣ್ಣ ಅವರ ಬಗ್ಗೆ ಅಗೌರವಿತವಾಗಿ ಸಂಸದರು ಮಾತನಾಡಿದ್ರು. ಅ ವಿಷಯ ಸಂಬಂಧವಾಗಿ ಮಾತನಾಡಿದಕ್ಕೆ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳ ಮೇಲೆ ನಮಗೆ ಗೌರವ ಇದೆ, ನಾನು ಇಲ್ಲಿಯ ವರೆಗೆ ಅವರ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಹೆಣ್ಣುಮಗಳಾಗಿ ಅಡ್ವಾಂಟೆಜ್ ಹಾಗಿ ತೆಗೆದುಕೊಂಡು ನಮ್ಮನ್ನು ವಿಕ್ನೇಸ್ ಅಂತ ತಿಳಿದುಕೊಳ್ಳಬೇಡಿ. ನೀವು ಸಂಸದರಾಗಿ ಐದು ವರ್ಷ ಜನತೆ ಆಯ್ಕೆ ಮಾಡಿದ್ದಾರೆ. ಕೆಲಸದ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿ ಎಂದು ನಿಖಿಲ್ ಹೇಳಿದ್ದಾರೆ.