ನಿನ್ನೆ ಮಾಜಿ ಸಿಎಂ ಕುಮಾರಸ್ವಾಮಿ ಬರ್ತ್ ಡೇ ಪ್ರಯುಕ್ತ ಅವರ ಪುತ್ರ , ಸ್ಯಾಂಡಲ್ ವುಡ್ ನ ಯುವ ನಟ ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷೆಯ “ರೈಡರ್” ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ..
ಲಹರಿ ಮ್ಯೂಸಿಕ್ ನಲ್ಲಿ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪಲಕ್ಷಂತಾರ ವೀವ್ಸ್ ಪಡೆದುಕೊಂಡಿದೆ ಟ್ರೇಲರ್.. ಸುಮಾರು 3 ನಿಮಿಷದ ಟ್ರೇಲರ್ ಗೆ ನೆಟಿಜನ್ಸ್ ಫಿದಾ ಆಗಿದ್ದಾರೆ..
ಟ್ರೇಲರ್ ನಲ್ಲಿ ಎಮೋಷನ್ , ಆಕ್ಷನ್ ಸೀನ್ಸ್ , ರೋಮಾಂಟಿಕ್ , ಫ್ಯಾಮಿಲಿ ಟೈಮ್ ಇಂದ ಹಿಡಿದು ಪ್ರತಿಯೊಂದರ ಎಳೆಯನ್ನ ತೋರಿಸಲಾಗಿದೆ.. ಯೂತ್ ಫುಲ್ ಲುಕ್ ನಲ್ಲಿ ನಿಖಿಲ್ ಸಖತ್ ಡ್ಯಾಶಿಂಗ್ ಆಗಿ ಕಾಣಿಸಿಕೊಂಡಿದ್ದು , ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.. ಸಿನಿಮಾತಂಡಕ್ಕೆ ನೆಟ್ಟಿಗರು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ..
ಸಿನಿಮಾದಲ್ಲಿ ನಿಖಿಲ್ ಗೆ ನಾಯಕಿಯಾಗಿ ಕಾಶ್ಮೀರಾ ಕಾಣಿಸಿಕೊಂಡಿದ್ರೆ , ಅಚ್ಯುತ್ ಕುಮಾರ್ , ದತ್ತಣ್ಣ , ಗರುಡ ರಾಮ್ , ಚಿಕ್ಕಣ್ಣ , ಶಿವರಾಜ್ ಕೆ ಆರ್ ಪೇಟೆ , ಶೋಭರಾಜ್ , ಅನುಷಾ ರಾಜ್ , ಸಂಪದ ಹುಲಿವಾನ , ರಾಜೇಶ್ ನಟರಂಗ , ನಿಹಾರಿಕಾ ಸೇರಿದಂತೆ ಅನೇಕರ ತಾರಾಬಳಗವಿದೆ..