Monday, September 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Hale Mysore

JDS | ರಾಷ್ಟ್ರೀಯ ಪಕ್ಷಗಳಿಂದ ಧರ್ಮಗಳ ನಡುವೆ ಬೆಂಕಿ : ನಿಖಿಲ್

Mahesh M Dhandu by Mahesh M Dhandu
April 26, 2022
in Hale Mysore, Newsbeat, ಹಳೇ ಮೈಸೂರು
jds
Share on FacebookShare on TwitterShare on WhatsappShare on Telegram

JDS | ರಾಷ್ಟ್ರೀಯ ಪಕ್ಷಗಳಿಂದ ಧರ್ಮಗಳ ನಡುವೆ ಬೆಂಕಿ : ನಿಖಿಲ್

ತುಮಕೂರು: ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಧರ್ಮಗಳ ನಡುವೆ ಬೆಂಕಿ ಹಚ್ಚಿ ಚುನಾವಣೆಯಲ್ಲಿ ಮತ ಪಡೆಯುತ್ತೇವೆ, ರಾಜ್ಯದ ಜನರನ್ನು ಯಾಮಾರಿಸುತ್ತೇವೆ ಎಂಬ ಭ್ರಮೆಯಲ್ಲಿದ್ದರೆ ಇದು ಸುಳ್ಳಾಗುವ ಸಮಯ ದೂರ ಇಲ್ಲ. ಜಾತಿ ಧರ್ಮದ ಲೆಕ್ಕಾಚಾರದ ಮೇಲೆ ರಾಜಕೀಯ ಮಾಡುವ ಕಾಂಗ್ರೆಸ್ ಹಿಜಾಬ್ ವಿಚಾರದಲ್ಲಿ ಯಾವ ಹೇಳಿಕೆಗಳನ್ನು ನೀಡಲಿಲ್ಲ. ಇನ್ನೂ ರಾಜ್ಯ ಸರ್ಕಾರ ಜನರನ್ನು ಎತ್ತಿಕಟ್ಟಿ ಮೌನವಾಗಿ ಕುಳಿತಿದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Related posts

ಬಲಿಪಡೆದ ಬರ್ತ್ ಡೇ

ಬಲಿಪಡೆದ ಬರ್ತ್ ಡೇ

September 23, 2023
ಕಹಿಯಾದ ಕಾವೇರಿ

ಕಹಿಯಾದ ಕಾವೇರಿ

September 23, 2023

ಪ್ರಾದೇಶಿಕ ನಾಡು, ನುಡಿ ಜಲ ಸಂರಕ್ಷಣೆಗೆ ಸಂಪೂರ್ಣ ಬದ್ಧವಾದ ಜೆಡಿಎಸ್ ಪಕ್ಷದ ಜನತಾಜಲಧಾರೆ ರಥಯಾತ್ರೆ ಇಂದು ತುಮಕೂರು ತಾಲೂಕಿನ ಗುಬ್ಬಿಯಲ್ಲಿ ಸಂಚರಿಸಿತು.  ರಥಯಾತ್ರೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿ ತೆರೆದ ವಾಹನದಲ್ಲಿ ಜೆಡಿಎಸ್ ಮುಖಂಡರೊಂದಿಗೆ ರೋಡ್ ಶೋ ನಡೆಸಿದರು. ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು ಜನತಾ ಜಲಧಾರೆ ರಥಯಾತ್ರೆಗೆ ಸ್ವಾಗತ ಕೋರಿದರು. ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜನತಾ ಜಲಧಾರೆ ರಥಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪವಿತ್ರ ಜಲ ಸಂಗ್ರಹಿಸಲಾಯಿತು.

nikhil kumaraswamy slams congress - bjp saaksha tv

ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಹಲವು ವರ್ಷಗಳಿಂದ ಅವಕಾಶ ನೀಡುತ್ತಿದ್ದೀರಾ. ಆದರೆ, ಇವರು ಕೊಟ್ಟ ಯಾವ ಆಶ್ವಾಸನೆಗಳನ್ನು ಈಡೇರಿಸಲಿಲ್ಲ. ಕೇವಲ ಸುಳ್ಳಿನ ಆಶ್ವಾಸನೆ ನೀಡುತ್ತಿದ್ದಾರೆ.ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ. ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕಾಂಗ್ರೆಸ್ ನವರು ಕಡಿಮೆಯೇನಲ್ಲ ಸಾವಿನ ಮೆನೆಯಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ. ಸಂತೋಷ್ ಅವರ ಮನೆಗೆ ಸಾಲು ಸಾಲು ಕಾಂಗ್ರೆಸ್ ನಾಯಕರು ಹೋಗಿ ಮಾಧ್ಯಮಗಳ ಮುಂದೆ ಫೋಸ್ ನೀಡಿದ್ರು. ಇವರು ಪರ್ಸಂಟೇಜ್ ಪಡೆದಿಲ್ಲವೇ, ರಾಜ್ಯದ ಸಂಪತ್ತನ್ನು ಲೂಟಿ ಮಾಡಿಲ್ಲವೇ..? ಕಾಂಗ್ರೆಸ್ ಪಕ್ಷದವರು ಕುಳಿತು ಆತ್ಮವಾಲೋಕನ ಮಾಡಿಕೊಳ್ಳಬೇಕು. ಈ ರೀತಿ ಎರಡೂ ರಾಷ್ಟ್ರೀಯ ಪಕ್ಷಗಳು ನಡೆದುಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚಿಕೊಂಡು ಸರ್ಕಾರ ಆಡಳಿತ ನಡೆಸುತ್ತಿದೆ. ಜನರನ್ನು ಎತ್ತಿಕಟ್ಟಿ ರಾಜ್ಯ ಬಿಜೆಪಿ ಸರ್ಕಾರ ಸದ್ಯ ಮೌನವಾಗಿ ಕುಳಿತಿದೆ, ಸರ್ಕಾರದ ಯಾವುದೇ ಆಕ್ಷೇಪಣೆ ಇಲ್ಲ. ಹಿಂದೂ ಪರಿಷತ್ತು, ಭಜರಂಗದಳವನ್ನು ಬಳಸಿಕೊಂಡು ಜನರ ಮದ್ಯೆ ಬೆಂಕಿ ಹಚ್ಚಿ ಕೂತು ತಮಾಷೆ ನೋಡುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸುವ ಕೆಲಸ ಆಗಬೇಕಿದೆ. ನಾವೆಲ್ಲರು ಮೊದಲು ಭಾರತೀಯರು ನಾವೆಲ್ಲ ಅಣ್ಣ-ತಮ್ಮಂದಿರಂತೆ ಕೇವಲ ರಾಜಕೀಯ ಲಾಭಕ್ಕಾಗಿ ನಮ್ಮ ನಡುವಿನ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ನಾವು ಸರಿಯಾದ ತೀರ್ಮಾನ ಮಾಡಬೇಕು. ಪ್ರಾದೇಶಿಲ ಪಕ್ಷವನ್ನು ಉಳಿಸುವುದು ಅತ್ಯವಶ್ಯಕ. ರೈತರಿಗಾಗಿ, ಶೋಷಿತರಿಗಾಗಿ, ಬಡವರಿಗಾಗಿ, ಯುವಕರಿಗಾಗಿ ಈ ಪಕ್ಷ ಉಳಿಯಬೇಕಿದೆ ಎಂದು ಕರೆ ನೀಡಿದರು.

 ಗುಬ್ಬಿ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಾಗರಾಜ್ ಅವರು ಎಂದು ಈಗಾಗಲೇ ನಿರ್ಧಾರ ಆಗಿದೆ. ನಾವು ಇಲ್ಲಿನ ಶಾಸಕರಿಗೆ ಏನು ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರದ ಶಾಸಕರನ್ನು ಮಂತ್ರಿ ಮಾಡಿದ್ದೆವು. ಸ್ವಲ್ಪನಾದ್ರೂ ತಾಯಿ ಹೃದಯ ಇದ್ದರೆ ನಿಮ್ಮನ್ನು ಬೆಳೆಸಿದ ಪಕ್ಷಕ್ಕೆ ಬೆನ್ನಿಗೆ ಚೂರಿ ಚುಚ್ಚುವ ಕೆಲಸ ಮಾಡಿದ್ದೀರಿ. ನಾವೆಲ್ಲಾ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದೀವಿ. ಯಾವ ಪಕ್ಷದಲ್ಲಿದ್ದೇನೆ ಎಂದು ಈ ಕ್ಷೇತ್ರದ ಶಾಸಕರಿಗೆ ಗೊತ್ತಿಲ್ಲ. ಇದು ಒಂದು ರೀತಿ ಬ್ಲಾಕ್‌ಮೇಲೆ ರಾಜಕಾರಣ ಆಗಿದೆ ಎಂದರು.

 ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಂ.ಟಿ. ಕೃಷ್ಣಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಅವರು ಭಾಗಿಯಾಗಿದ್ದರು. nikhil kumaraswamy slams congress – bjp

Tags: #Saaksha TVJDSNikhil KumaraswamyTumakur
ShareTweetSendShare
Join us on:

Related Posts

ಬಲಿಪಡೆದ ಬರ್ತ್ ಡೇ

ಬಲಿಪಡೆದ ಬರ್ತ್ ಡೇ

by Honnappa Lakkammanavar
September 23, 2023
0

ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಬೈಕ್ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಯಶವಂತಪುರ (Yeshwantpur) ಯಾರ್ಡ್ ಬಳಿ ನಡೆದಿದೆ....

ಕಹಿಯಾದ ಕಾವೇರಿ

ಕಹಿಯಾದ ಕಾವೇರಿ

by Honnappa Lakkammanavar
September 23, 2023
0

ಸುಪ್ರೀಂ ಕೋರ್ಟ್ (Supreme Court) ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ ಹೀಗಾಗಿ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 96.90 ಅಡಿಗೆ ಕುಸಿದಿದೆ. ತಮಿಳುನಾಡಿಗೆ...

ಸರಳ ದಸರಾಕ್ಕೆ ಸರ್ಕಾರ ನಿರ್ಧಾರ

ಸರಳ ದಸರಾಕ್ಕೆ ಸರ್ಕಾರ ನಿರ್ಧಾರ

by Honnappa Lakkammanavar
September 22, 2023
0

ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರೈತ ವಲಯ ಸಂಕಷ್ಟದಲ್ಲಿದೆ. ಹೀಗಾಗಿ ಪ್ರಸಕ್ತ ವರ್ಷ ಸರಳ ಹಾಗೂ ಅರ್ಥಪೂರ್ಣ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೈಸೂರು...

ಕುಡಿದ ಮತ್ತಿನಲ್ಲಿ ಮದುವೆಯಾದ ಯುವಕರಿಬ್ಬರು, ನಂತರ ಸಂಸಾರ ನಡೆಸುವಂತೆ ಯುವಕನ ಪಟ್ಟು  

ಈ ಡಾಕ್ಟರ್‌ ಕ್ವಾರ್ಟರ್ಸ್‌ ತುಂಬಾ ಕ್ವಾರ್ಟರ್‌ ಬಾಟಲ್‌

by Honnappa Lakkammanavar
September 21, 2023
0

ವೈದ್ಯರಿಗೆ ರೋಗಿಗಳನ್ನು ನೋಡುವುದೇ ಕಾಯಕ. ಆದರೆ, ಇಲ್ಲೊಬ್ಬ ವೈದ್ಯನಿಗೆ ಕುಡಿಯುವುದೇ ಕಾಯಕವಾಗಿ ಬಿಟಟ್ದೆ. ಅದು ಬಿಟ್ಟು ಮತ್ತೆ ಬೇರೆ ಕೆಲಸ ಎಂದರೆ ಸಿಗರೇಟು ಸೇದುವುದು. ಆದರೆ, ಆಸ್ಪತ್ರೆಗೆ...

ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

ವಿದ್ಯಾರ್ಥಿಗಳ ಜಗಳ ಕೊಲೆಯಲ್ಲಿ ಅಂತ್ಯ

by Honnappa Lakkammanavar
September 21, 2023
0

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಶುರುವಾದ ವಿದ್ಯಾರ್ಥಿಗಳ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಇಲ್ಲಿಯ ಜೆ.ಪಿನಗರದ ಕಾಲೇಜು ಹತ್ತಿರ ನಡೆದಿದೆ. ಕೃಷ್ಣ(17) ಮೃತ ರ್ದುದೈವಿ. ಕ್ಷುಲ್ಲಕ ಕಾರಣಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

ಕಾಡಿಗೆ ಕರೆದೊಯ್ದು ಪ್ರಿಯತಮೆಯನ್ನೇ ಕೊಂದ ಪ್ರೇಮಿ?

September 25, 2023
ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

ವಿವೋ T2 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ

September 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram