ರಾಮನಗರ: ಇದೊಂದು ಬಾರಿ ನಿಮ್ಮ ಸೇವೆ ಮಾಡುವ ಅವಕಾಶವನ್ನು ನನಗೆ ನೀಡಿ ಎಂದು ನಿಖಿಲ್ ಕುಮಾರಸ್ವಾಮಿ ತನ್ನ ಪತ್ನಿಯೊಂದಿಗೆ ಕೈ ಮುಗಿದು, ಮಂಡಿಯೂರಿ ಜನರಲ್ಲಿ ಮನವಿ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ (Ramanagara) ಪ್ರಚಾರದ ವೇಳೆ ಮಾತನಾಡಿದ ನಿಖಿಲ್, ನಾನು ಭಾವನಾತ್ಮಕವಾಗಿ ನಿಮಗೆ ಕೇಳುತ್ತಿಲ್ಲ. ಪ್ರತಿಯೊಬ್ಬರೂ ನನಗೆ ಆಶೀರ್ವಾದ ಮಾಡಿ ಎಂದು ಕೇಳುತ್ತಿದ್ದೇನೆ ಎಂದಿದ್ದಾರೆ.
ದೇವೇಗೌಡರು ಮೊಮ್ಮಗನನ್ನು ಗೆಲ್ಲಿಸಲು ಆಂಬುಲೆನ್ಸ್ನಲ್ಲಿ ಬರುತ್ತಾರೆ ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದರು. ಚನ್ನಪಟ್ಟಣದಲ್ಲಿ (Channapatna) ನಿಖಿಲ್ ನಿಂತಿದ್ದಾನೆ ಎಂದು ದೇವೇಗೌಡರು ಬಂದು ಪ್ರಚಾರ ಮಾಡುತ್ತಿದ್ದಾರೆ ಅನ್ನುವ ಪ್ರಶ್ನೆ ಅಲ್ಲ. ಯಾವುದೇ ಸಾಮಾನ್ಯ ಕಾರ್ಯಕರ್ತ ನಿಂತಿದ್ದರೂ ದೇವೇಗೌಡರು (HDDevegowda) ಪ್ರಚಾರಕ್ಕೆ ಬರುತ್ತಿದ್ದರು ಎಂದು ಹೇಳಿದ್ದಾರೆ.
ವರದೇಗೌಡರು ನಮ್ಮ ಪಕ್ಷದಿಂದ ಶಾಸಕರಾಗಿ ಮನೆ ಮಗನಾಗಿ ಇಲ್ಲಿ ಕೆಲಸ ಮಾಡಿದವರು. ಇವರೆಲ್ಲ ನನಗೆ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಈ ಚುನಾವಣೆ ನನ್ನ ಬದುಕಿನ ಬಹುದೊಡ್ಡ ಅಗ್ನಿಪರೀಕ್ಷೆಯಾಗಿದೆ. ದಯವಿಟ್ಟು ಈ ಬಾರಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ್ದಾರೆ.