ಕೇರಳದಲ್ಲಿ ನಿಫಾ ವೈರಸ್ ಆತಂಕ – ನಿಫಾ ವೈರಸ್‌ನ ಲಕ್ಷಣಗಳೇನು?

1 min read
Nipah virus infection what is its Symptoms

ಕೇರಳದಲ್ಲಿ ನಿಫಾ ವೈರಸ್ ಆತಂಕ – ನಿಫಾ ವೈರಸ್‌ನ ಲಕ್ಷಣಗಳೇನು?

ಒಂದೆಡೆ ಕೇರಳ ರಾಜ್ಯವು ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ ನಿಫಾ ವೈರಸ್ ಸಹ ಪ್ರತ್ಯಕ್ಷವಾಗುವ ಮೂಲಕ ಜನರನ್ನು ಆತಂಕಕ್ಕೆ ದೂಡಿದೆ.

ನಿಫಾ ವೈರಸ್ ಸೋಂಕಿಗೆ ಒಳಗಾಗಿದ್ದ 12 ವರ್ಷದ ಬಾಲಕ ಭಾನುವಾರ ರಾಜ್ಯದ ಕೋಝಿಕ್ಕೋಡ್ ನಲ್ಲಿ ಮೃತಪಟ್ಟಿದ್ದಾನೆ.

ನಿಫಾ ವೈರಸ್ ಸೋಂಕು ಕೇರಳದಲ್ಲಿ ಮೇ 2018 ರಲ್ಲಿ ಮೊದಲು ದೃಢಪಟ್ಟಿತ್ತು. ಆ ಸಮಯದಲ್ಲಿ ಈ ವೈರಸ್ ನಿಂದ ರಾಜ್ಯದಲ್ಲಿ 17 ಮಂದಿ ಸಾವನ್ನಪ್ಪಿದ್ದರು.
Nipah virus infection what is its Symptoms
ಈ ಬಾರಿ ಮತ್ತೆ ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳು ವರದಿಯಾಗಿರುವುದರಿಂದ, ಕೇಂದ್ರ ಸರ್ಕಾರದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ (NCDC) ತಂಡವನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಹಾಯ ಮಾಡಲು ಕಳುಹಿಸಲಾಗಿದೆ.

ವರದಿಯ ಪ್ರಕಾರ, ನಿಫಾ ವೈರಸ್‌ನ ಲಕ್ಷಣಗಳು ಇನ್ನೂ ಕೆಲವು ಜನರಲ್ಲಿ ಕಂಡುಬಂದಿದೆ.
ನಿಫಾ ವೈರಸ್ ಸೋಂಕಿತ ಮಗುವಿನ ಸಂಪರ್ಕಕ್ಕೆ ಬಂದ 188 ಜನರಲ್ಲಿ 20 ಜನರು ಹೆಚ್ಚಿನ ಅಪಾಯದ ಸ್ಥಿತಿಯಲ್ಲಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಇವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ ಇಬ್ಬರು ವ್ಯಕ್ತಿಗಳು ಸೇರಿದ್ದಾರೆ.

ಇಲ್ಲಿಯವರೆಗಿನ ಪರಿಸ್ಥಿತಿ ಅವಲೋಕಿಸಿದಾಗ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದ್ದು, ಆಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಪ್ರೋಟೋಕಾಲ್ ಅನ್ನು ಸಂಪೂರ್ಣವಾಗಿ ಅನುಸರಿಸುತ್ತಿದೆ ಎಂದು ತಿಳಿಸಿದೆ.

ಕೋವಿಡ್ -19 ನಂತೆ ಈ ಸಾಂಕ್ರಾಮಿಕ ಕೂಡ ತುಂಬಾ ಸಾಂಕ್ರಾಮಿಕವಾಗಿದೆ.

ನಿಫಾ ವೈರಸ್‌ನ ಲಕ್ಷಣಗಳು

ನಿಫಾ ವೈರಸ್ ಸೋಂಕಿಗೆ ಒಳಗಾದ 5-14 ದಿನಗಳ ನಂತರ, ಈ ವೈರಸ್ ಅಧಿಕ ಜ್ವರ ಮತ್ತು ತಲೆನೋವನ್ನು ಉಂಟುಮಾಡಬಹುದು.

ಸೋಂಕಿನ ಆರಂಭದಲ್ಲಿ, ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರ ಜೊತೆಯಲ್ಲಿ, ಹಲವರಿಗೆ ನರವೈಜ್ಞಾನಿಕ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು.

ನಿಫಾ ವೈರಸ್ ಹರಡುವ ರೀತಿ ಹೇಗೆ

ಸಾಮಾನ್ಯವಾಗಿ, ಈ ವೈರಸ್ ಮನುಷ್ಯರಿಗೆ ಬಾವಲಿಗಳು, ಹಂದಿಗಳು ಅಥವಾ ಸೋಂಕಿಗೆ ಒಳಗಾಗುವ ಇತರ ಮನುಷ್ಯರಿಂದ ಹರಡುತ್ತದೆ.

ಡಬ್ಲ್ಯುಎಚ್‌ಒ ಪ್ರಕಾರ, ನಿಫಾ ವೈರಸ್ ವೇಗವಾಗಿ ಹರಡುವ ವೈರಸ್ ಆಗಿದ್ದು, ಇದು ಮಾನವರು ಮತ್ತು ಪ್ರಾಣಿಗಳಲ್ಲಿ ಗಂಭೀರ ರೋಗಗಳನ್ನು ಉಂಟುಮಾಡುತ್ತದೆ.

ನಿಫಾ ವೈರಸ್ ಚಿಕಿತ್ಸೆ?

ಕೋವಿಡ್ -19 ರಂತೆ, ಈ ವೈರಸ್‌ನಿಂದ ಮನುಷ್ಯರು ಮತ್ತು ಪ್ರಾಣಿಗಳನ್ನು ರಕ್ಷಿಸಲು ಇದುವರೆಗೆ ಯಾವುದೇ ಚುಚ್ಚುಮದ್ದನ್ನು ಕಂಡು ಹಿಡಿದಿಲ್ಲ.
wearing masks
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#Nipahvirus #infection #Symptoms

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd