niramala sitharaman
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡೆವಲಪರ್ ಮತ್ತು ಮನೆ ಖರೀದಿದಾರರಿಗೆ ಸಿಹಿಸುದ್ದಿ ನೀಡಿದ್ದಾರೆ. ಹೌದು ಕೇಂದ್ರ ಸಚಿವ ಸೀತಾರಾಮನ್ ಅವರು ಆದಾಯ ತೆರಿಗೆ ರಿಲೀಫ್ ಘೋಷಿಸಿದ್ದಾರೆ. ಯೋಜನೆ ಉದ್ದೇಶಿಸಿ ಮಾತನಾಡಿರುವ ಅವರು, ಭಾರತದ ಅರ್ಥ ವ್ಯವಸ್ಥೆ ಉತ್ತಮ ಚೇತರಿಕೆ ಕಾಣುತ್ತಿದೆ ಎಂದಿದ್ದಾರೆ. ಅಲ್ಲದೇ 3ನೇ ತ್ರೈಮಾಸಿಕದಲ್ಲಿ ಮತ್ತಷ್ಟು ಬಲಿಷ್ಠ ಪ್ರಗತಿಯನ್ನ ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಬೇಡಿಕೆ ಹೆಚ್ಚಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಕಂತೆ ಪ್ಯಾಕೇಜ್ ಗೆ ಅನುಮೋದನೆ ನೀಡಿದ ಮರುದಿನವೇ ‘ಆತ್ಮನಿರ್ಭಾರ್ 2.0’ ಅಡಿಯಲ್ಲಿ ಪ್ರಮುಖ ಅಂಶಗಳ ಪ್ರಗತಿಯ ಬಗ್ಗೆ ಸೀತಾರಾಮನ್ ಅವರು ಮಹತ್ವದ ಭಾಷಣ ಮಾಡಿದ್ದಾರೆ.
ಇದೇ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಕೋವಿಡ್ -19 ನಿಗ್ರಹಕ್ಕೆ ಲಸಿಕೆ ಸಂಶೋಧನೆಗೆ 900 ಕೋಟಿ ರೂಪಾಯಿ ಅನುದಾನವನ್ನ ಘೋಷಣೆ ಮಾಡಿದ್ದಾರೆ. ಆತ್ಮಾನಿರ್ಭರ್ ಭಾರತ್ ಪ್ಯಾಕೇಜ್ ಅನ್ನ ಈಗಾಗಲೇ ಘೋಷಣೆ ಮಾಡಲಾಗಿದೆ. ಇದರ ಮೂರನೇ ಉತ್ತೇಜನವನ್ನ ಘೋಷಿಸಿದ ಹಣಕಾಸು ಸಚಿವರು, ಕೋವಿಡ್-19 ಲಸಿಕೆಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾತ್ರ ಈ ನಿಧಿಯನ್ನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನೂ ಲಸಿಕೆಯ ನಿಜವಾದ ವೆಚ್ಚ, ವಿತರಣೆ ವೆಚ್ಚ ಪ್ರತ್ಯೇಕವಾಗಿರುತ್ತದೆ ಎಂದು ಸಹ ಸ್ಪಷ್ಟನೆ ನೀಡಿದ್ದಾರೆ.
niramala sitharaman
ನಾವು ಗೆದ್ದಾಗ ಇವ್ನು ಏನಾಗಿದ್ನಂತೆ : ಕಟೀಲ್ ವಿರುದ್ಧ ಸಿದ್ದು ಕಿಡಿ
10..100ವರ್ಷ ಅಲ್ಲ, ಜೀವಿ ಇರೋತನಕ ಬಿಜೆಪಿ ಅಧಿಕಾರ ಮಾಡ್ಲಿ: ಕಟೀಲ್‍ಗೆ ಡಿಕೆಶಿ ಡಿಚ್ಚಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel