ಕೊರೊನಾ ಹರಡುವಿಕೆ ತಡೆಗಟ್ಟಲು ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಆತಂಕಕ್ಕೆ ಒಳಾಗಿರುವ ದೇಶದ ಜನರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಪ್ ನೀಡಿದೆ. ಸೋಂಕು ಲೆಕ್ಕಿಸದೆ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್, ದೇಶದ ಬಡವರು, ವಲಸಿಗರು, ಮಹಿಳೆಯರು ಸೇರಿದಂತೆ ಶ್ರಮಿಕ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ 1.70 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜನ್ನು ಘೋಷಣೆ ಮಾಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಮಾ ಸೀತಾರಾಮನ್, ಕೊರೊನಾ ವಿರುದ್ದ ದೇಶವೇ ಹೋರಾಟ ನಡೆಸುತ್ತಿದೆ. ಹೋರಾಟದ ಮುಂಚೂಣಿಯಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರು, ನರ್ಸ್ ಗಳು ಎಲ್ಲರಿಗೂ ತಲಾ 50 ಲಕ್ಷ ವಿಮೆ ಘೋಷಣೆ ಮಾಡಿದ್ದಾರೆ. ಬಡವರಿಗೆ ಗರೀಬ್ ಕಲ್ಯಾಣ ಯೋಜನೆಯನ್ನು ಜಾರಿ ಮಾಡಿದ್ದಾರೆ. ಈ ಯೋಜನೆಯಲ್ಲಿ 80 ಕೋಟಿ ಫಲಾನುಭವಿಗಳು ಇರುತ್ತಾರೆ. ಮುಂದಿನ ಮೂರು ತಿಂಗಳು ಕಾಲ ಪ್ರತಿಯೊಬ್ಬರಿಗೂ 5 ಕಿಲೋ ಅಕ್ಕಿ ಅಥವಾ 5 ಕಿಲೋ ಗೋಧಿ, ಜೊತೆಗೆ ಒಂದು ಕಿಲೋ ದಾಲ್ ಕೂಡ ಸಿಗಲಿದೆ.
ಇನ್ನೂ ನೇರ ನಗದು ವರ್ಗಾವಣೆ ಯೋಜನೆಯಡಿಯಲ್ಲಿ 8.69 ಕೋಟಿ ರೈತರಿಗೆ ಏಪ್ರಿಲ್ ಮೊದಲ ವಾರದಲ್ಲಿ 2,000 ರೂಪಾಯಿ ಕಂತು ಪಾವತಿಯಾಗಲಿದೆ. ಅದೇ ರೀತಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಪ್ರಕಾರ 5 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗುವಂತೆ ಪ್ರತಿ ಕೆಲಸಗಾರನಿಗೆ ಹೆಚ್ಚುವರಿಯಾಗಿ 2,000 ರೂಪಾಯಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ