ಕನ್ನಡದ ಸ್ವೀಟಿ ಅನುಷ್ಕಾ ಹಾಗೂ ಮಾಧವನ್ ಒಟ್ಟಾಗಿ ನಟಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಚಿತ್ರ ನಿಶ್ಯಬ್ಧಂ ಸದ್ಯ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಗೆ ರೆಡಿಯಾಗಿದೆ. ಹೇಮಂತ್ ಮಧುಕರ್ ಅವರ ನಿರ್ದೇಶನದಲ್ಲಿ ಮುಡಿಬರುತ್ತಿರುವ ಈ ಸೆನ್ಸೇಷನಲ್ ಚಿತ್ರ ಸದ್ಯ ಟೈಟಲ್ ಹಾಗೂ ಪೋಸ್ಟರ್ ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಲ್ಲದೇ ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಇದೀಗ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ.
ತಮಿಳು, ತೆಲುಗು, ಹಿಂದಿ, ಮಳಯಾಳಂ, ಇಂಗ್ಲಿಷ್. ಒಟ್ಟು ಐದು ಭಾಷೆಯಲ್ಲಿ ಈ ಚಿತ್ರ ತೆರೆಕಾಣಲಿದೆ. ಈಗಾಗಲೇ ಈ ಚಿತ್ರದ ರೈಟ್ಸ್ ಅಮೇಜಾನ್ ಪ್ರೈಮ್ ಗೆ ಸೇಲ್ ಆಗಿದ್ದು, ಅಕ್ಟೋಬರ್ 2 ಕ್ಕೆ ರಿಲೀಸ್ ಆಗಲಿದೆ.
ಚಿತ್ರಕ್ಕೆ TG ವಿಶ್ವಪ್ರಸಾದ್ ಹಾಗೂ ಕೋನಾ ವೆಂಕಟ್ ಅವರು ಬಂಡವಾಳ ಹೂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಚಿತ್ರ ಈ ವೇಳೆಗಾಗಲೇ ಸಿನಿಮಂದಿರಗಳಲ್ಲಿ ತೆರೆಕಾಣಬೇಕಾಗಿತ್ತು. ಆದರೆ ಕೊರೊನಾ ಬಿಕ್ಕಟ್ಟಿಂದಾಗಿ ಚಿತ್ರದ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಯಿತು. ಇದೀಗ ಡಿಜಿಟಲ್ ಮೀಡಿಯಾಗೆ ಲಗ್ಗೆ ಇಡಲು ಸಜ್ಜಾಗಿದೆ. ಮೂಲಗಳ ಪ್ರಕಾರ ಅಮೇಜಾನ್ ಪ್ರೈಂ ನಿಶ್ಯಬ್ಧಂ ಸಿನಿಮಾ ರೈಟ್ಸ್ ಅನ್ನು ಬರೋಬ್ಬರಿ 26 ಕೋಟಿ ರೂಪಾಯಿಗೆ ಕೊಂಡುಕೊಂಡಿದೆ ಎನ್ನಲಾಗಿದೆ.
ಇನ್ನೂ ಈ ಹಾರರ್ ಚಿತ್ರದಲ್ಲಿ ಮತ್ತೊಂದು ವಿಶೇಷ ಅಂದ್ರೆ ಮಾಧವನ್ ಹಾಗೂ ಅನುಷ್ಕಾ ಜೋಡಿ. ರೆಂಡಿ ಚಿತ್ರದ ಬಳಿಕ ಬರೊಬ್ಬರಿ 14 ವರ್ಷಗಳ ಬಳಿಕ ಅನುಷ್ಕಾ ಹಾಗೂ ಮಾಧವನ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಅನುಷ್ಕಾ ಪಾತ್ರ ವಿಭಿನ್ನವಾಗಿರಲಿದ್ದು, ಮಾತು ಬಾರದೆ ಹಾಗೂ ಕಿವುಡಾಗಿರುವ ಕಲಾವಿದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.