Nithyananda Sister City : ಅಮೆರಿಕಾ ನಗರಗಳೊಂದಿಗೆ ಕೈಲಾಸ ದೇಶದ ಒಪ್ಪಂದ – ಹಗರಣ ಬಯಲಿಗೆ…..
ಸ್ವಯಂ ಘೋಷಿತ ದೇವಮಾನವ, ನಿತ್ಯಾನಂದ ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳ ಆರೋಪದ ನಂತರ ಭಾರತದಿಂದ ಪಲಾಯನಗೈದಿದ್ದಾನೆ, ದಕ್ಷಿಣ ಅಮೆರಿಕಾದ ದ್ವೀಪವೊಂದರಲ್ಲಿ ವಾಸವಾಗಿದ್ದು, ಅದಕ್ಕೆ ಕೈಲಾಸ ದೇಶ ಎಂದು ಹೆಸರಿಟ್ಟುಕೊಂಡಿದ್ದಾನೆ. ಇತ್ತೀಚೆಗೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ದೇಶದ ಪ್ರತಿನಿಧಿಗಳು ವಿಶ್ವಸಂಸ್ಥೆಯಲ್ಲಿ ಭಾಗವಹಿಸಿದ್ದರಿ. ಆದರೇ ವಿಶ್ವಸಂಸ್ಥೆ ನಿತ್ಯಾನಂದನ ಕೈಲಾಸವನ್ನ ದೇಶ ಎಂದು ಪರಿಗಣಿಸಿಲ್ಲ. ಇದೀಗ ನಿತ್ಯನಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಅಮೆರಿಕದ 30 ಕ್ಕೂ ಹೆಚ್ಚು ನಗರಗಳ ಜೊತೆ ಸ್ನೇಹಪೂರ್ವಕವಾಗಿ ಸೇರಿರುವ ನಗರಗಳೆಂಬ ಒಪ್ಪಂದವನ್ನ ಮಾಡಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ನಿತ್ಯಾನಂದ ಅಮೆರಿಕದ 30 ನಗರಗಳೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕಿದ್ದಾನೆ ಎಂದು ಫಾಕ್ಸ್ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ. ನ್ಯೂಜೆರ್ಸಿಯ ನೆವಾರ್ಕ್ ನಗರ ನಿತ್ಯಾನಂದನ ನಕಲಿ ರಾಷ್ಟ್ರದೊಂದಿಗೆ ಸಿಸ್ಟರ್ ಸಿಟಿ ಒಪ್ಪಂದವನ್ನ ಮಾಡಿಕೊಂಡಿರುವುದಾಗಿ ಬಹಿರಂಗವಾಗಿದೆ. ಈ ನಗರದ ಜೊತೆಗೆ, ಕೈಲಾಸ ದೇಶ ರಿಚ್ಮಂಡ್, ವರ್ಜೀನಿಯಾ, ಡೇಟನ್, ಓಹಿಯೋ, ಬ್ಯೂನಾ ಪಾರ್ಕ್, ಫ್ಲೋರಿಡಾ, ಮುಂತಾದ 30 ಇತರ ನಗರಗಳೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಯನ್ನ ಸ್ಥಾಪಿಸಲಾಗಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಮೆರಿಕದ ಫಾಕ್ಸ್ ನ್ಯೂಸ್ ಸಂಸ್ಥೆ ತನಿಖಾ ವರದಿಯೊಂದನ್ನ ಸಿದ್ಧಪಡಿಸಿದ್ದು, ಅದರಲ್ಲಿ ನಿತ್ಯಾನಂದ ಎಂಬ ನಕಲಿ ಸ್ವಾಮೀಜಿ ವಾಸ್ತವದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಕೇವಲ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬಹುದಾದಂತಹ ದೇಶವೊಂದನ್ನು ಸೃಷ್ಟಿಸಿದ್ದಾನೆ. ಅದಕ್ಕೆ ಕೈಲಾಸ ಎಂಬ ಹೆಸರು ಕೂಡಾ ಇಟ್ಟಿದ್ದಾನೆ. ಆ ದೇಶಕ್ಕೆ ಕರೆನ್ಸಿ, ಪಾಸ್ಪೋರ್ಟ್, ರಾಷ್ಟ್ರ ಲಾಂಛನ ಎಲ್ಲವೂ ಇರುವುದಾಗಿ ಘೋಷಿಸಿದ್ದಾನೆ. ಇಂತಹ ನಕಲಿ ಗುರುವಿನ ಜೊತೆ ಅಮೆರಿಕದ ಈ ಮಹಾನಗರಗಳು ಒಪ್ಪಂದ ಮಾಡಿಕೊಂಡಿರುವುದು ಹಾಸ್ಯಾಸ್ಪದ, ಇದು ತನಿಖೆಗೆ ಅರ್ಹವಾದ ವಿಚಾರ ಎಂದು ತಿಳಿಸಿದೆ.
ಈ ತನಿಖಾ ವರದಿ ಪ್ರಕಟಗೊಳ್ಳುತ್ತಲೇ ನ್ಯೂಜೆರ್ಸಿ ನಗರ ಕೈಲಾಸದೊಂದಿಗೆ ಮಾಡಿಕೊಂಡಿದ್ದ ಸಿಸ್ಟರ್ ಸಿಟಿ ಒಪ್ಪಂದವನ್ನು ರದ್ದುಗೊಳಿಸಿದೆ.
Nithyananda Sister City : Kailasa Country’s Agreement with American Cities – Scam Revealed….