nitish kumar
ಬಿಹಾರ: ಬಿಹಾರದಲ್ಲಿ ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸತತ 4ನೇ ಬಾರಿಗೆ ಬಿಹಾರ ಅಧಿಕಾರದ ಚುಕ್ಕಾಣಿ ಹಿಡಿಯಲು ನಿತೀಶ್ ಕುಮಾರ್ ಸಜ್ಜಾಗಿದ್ದಾರೆ. ಆದ್ರೆ ಚುನಾವಣೆಗೂ ಮುನ್ನ ಪ್ರಚಾರದ ವೇಳೆ ಹೇಳಿದ್ದ ಮಾತಿಗೆ ಇದೀಗ ನಿತೀಶ್ ಕುಮಾರ್ ಉಲ್ಟಾ ಹೊಡೆದಿದ್ದಾರೆ.
ಹೌದು ಚುನಾವಣಾ ಪ್ರಚಾರಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇದು ನನ್ನ ಕೊನೆಯ ಚುನಾವಣೆ, ಕೊನೆಯ ಬಾರೀ ನನ್ನನ್ನ ಗೆಲ್ಲಿಸಿ ಎಂದು ಭಾವುಕರಾಗಿ ಸಾರ್ವಜನಿಕರಲ್ಲಿ ಮನವಿಮಾಡಿಕೊಂಡಿದ್ದರು. ಆದ್ರೆ ಇದೀಗ ತಮ್ಮ ಮಾತಿಗೆ ಉಲ್ಟಾ ಹೊಡೆದಿರುವ ನಿತೀಶ್ ಮಾಧ್ಯಮದವರ ಮೇಲೆಯೇ ಗೂಬೆ ಕೂರಿಸಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪತ್ರಕರ್ತರ ಕತ್ತು ಹಿಸುಕಲಾಗ್ತಿದೆ : ರಾಹುಲ್

ಹೌದು.. ವೇದಿಕೆಯ ಮೇಲೆ ನಿಂತು ಇದು ನನ್ನ ಕೊನೆಯ ಚುನಾವಣೆ ಎಂದಿದ್ದ ನಿತೀಶ್ ಕುಮಾರ್, ಇದೀಗ ನಾನು ರಾಜಕೀಯ ನಿವೃತ್ತಿ ಬಗ್ಗೆ ಮಾತೇ ಆಡಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ. ನಾನು ಚುನಾವಣಾ ಪ್ರಚಾರದಲ್ಲಿ ಮಾಡಿದ ಭಾಷಣವನ್ನು ಮಾಧ್ಯಮದವರು ತಪ್ಪಾಗಿ ಗ್ರಹಿಸಿದ್ದಾರೆ. ಒಳ್ಳೆಯದಾಗಿ ಮುಗಿದರೆ ಎಲ್ಲವೂ ಒಳ್ಳೆಯದೇ ಎಂದು ನಾನು ಹೇಳಿದ್ದೆ. ಆದರೆ ಅದನ್ನು ನಾನು ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ ಎಂದು ಬಿಂಬಿಸಲಾಗಿದೆ’ ಎಂದು ತಿಳಿಸಿದ್ದಾರೆ. ಒಟ್ಟಾರೆ ನಿತೀಶ್ ಕುಮಾರ್ ಅವರು ಚುನಾವಣೆಗೂ ಮುಂಚೆ ಒಂದು ಮಾತು ಗೆದ್ದ ಮೇಲೆ ಒಂದು ಮಾತನ್ನ ಆಡುತ್ತಿರೋದು ನಾನಾ ಚರ್ಚೆಗಳಿಗೆ ಕಾರಣವಾಗಿದೆ.
nitish kumar
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








