ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪತ್ರಕರ್ತರ ಕತ್ತು ಹಿಸುಕಲಾಗ್ತಿದೆ : ರಾಹುಲ್
ನವದೆಹಲಿ : ಅಸ್ಸಾಂನಲ್ಲಿ ಪತ್ರಕರ್ತ ಪರಾಗ್ ಭುಯಾನ್ ಹಿಟ್ ಅಂಡ್ ರನ್ ಅಪಘಾತದಲ್ಲಿ ಮೃತಪಟ್ಟಿದ್ದು, ಇದು ಕೊಲೆ ಎಂದು ಆರೋಪಿಸಲಾಗುತ್ತಿದೆ.
ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ಬಯಲಿಗೆಳೆಯುವ ಪತ್ರಕರ್ತರನ್ನು ಸದೆ ಬಡಿಯಲಾಗುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಬಿಜೆಪಿ ನಾಯಕರ ಭ್ರಷ್ಟಾಚಾರ ಬಯಲಿಗೆಳೆದ ಪತ್ರಕರ್ತರನ್ನು ಅನುಮಾನಾಸ್ಪದವಾಗಿ ಹತ್ಯೆ ಮಾಡಲಾಗಿದೆ.
ಅವರ ಕುಟುಂಬಕ್ಕೆ ತನ್ನ ಸಂತಾಪಗಳು. ಇದು ಮಧ್ಯಪ್ರದೇಶ ಅಥವಾ ಉತ್ತರ ಪ್ರದೇಶವಿರಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟರನ್ನು ರಕ್ಷಿಸಲು ನೈಜ ಪತ್ರಕರ್ತರ ಕತ್ತು ಹಿಸುಕಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಗಿನ್ನಿಸ್ ದಾಖಲೆಗೆ ಸಜ್ಜಾಗಿದೆ ರಾಮ ಜನ್ಮಭೂಮಿ!
ಅಸ್ಸಾಂನ ಸ್ಥಳೀಯ ಚಾನೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪರಾಗ್ ಭುಯಾನ್, ತಿನ್ಸುಕಿಯಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಮತ್ತು ಅಕ್ರಮ ಚಟುವಟಿಕೆಗಳನ್ನು ಬಯಲು ಮಾಡಿದ್ದರು.
ಈ ಹಿನ್ನೆಲೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಚಾನೆಲ್ ಮುಖ್ಯಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಆದೇಶಿಸಿದ್ದಾರೆ.
ಖಾಸಗಿ ವಾಹಿನಿಯ ಪತ್ರಕರ್ತ ಪರಾಗ್ ಭುಯಾನ್ ವಾಹನಕ್ಕೆ ಬುಧವಾರ ರಾತ್ರಿ ಅವರ ಮನೆಯ ಬಳಿಯೇ ಬೇರೆ ವಾಹನ ಡಿಕ್ಕಿ ಹೊಡೆದಿತ್ತು.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪರಾಗ್ ಭುಯಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇದು ಆಕಸ್ಮಿಕವ ಸಾವಲ್ಲ, ವ್ಯವಸ್ಥಿತ ಕೊಲೆ ಎಂದು ವಾಹನಿಯ ಮುಖ್ಯಸ್ಥರು ಮತ್ತು ಪರಾಗ್ ಕುಟುಂಬಸ್ಥರು ಆರೋಪಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel