ಗಿನ್ನಿಸ್ ದಾಖಲೆಗೆ ಸಜ್ಜಾಗಿದೆ ರಾಮ ಜನ್ಮಭೂಮಿ!
ಅಯೋಧ್ಯೆ : ಗಿನ್ನಿಸ್ ದಾಖಲೆಗೆ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ನಡೆದಿದೆ. ರಾಮ ಜನ್ಮಭೂಮಿಯ ಸರಯೂ ನದಿ ತಟದಲ್ಲಿ ಈ ಬಾರಿಯ ದೀಪಾವಳಿಗೆ 5 ಲಕ್ಷ 51 ಸಾವಿರ ಮಣ್ಣಿನ ದೀಪಗಳನ್ನ ಬೆಳಗಿಸುವ ಮೂಲಕ ಹೊಸ ಇತಿಹಾಸವನ್ನು ರಚಿಸಲಾಗುತ್ತಿದೆ.
ಅಯೋಧ್ಯೆ ನಗರದಲ್ಲಿ ಕಳೆದ 3 ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಸರಯೂ ನದಿದಡದಲ್ಲಿ ಸುಮಾರು 10,000ಕ್ಕೂ ಹೆಚ್ಚು ಸ್ವಯಂಸೇವಕರು ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ.
ಈ ಸಂಪೂರ್ಣ ಕಾರ್ಯಕ್ರಮ ರಾಮ್‍ನ ಪೈಡಿ ಕ್ಯಾಂಪಸ್‍ನಲ್ಲಿ ನಡೆಯಲಿದ್ದು, ಇದಕ್ಕಾಗಿ ಸಖಲ ಸಿದ್ಧತೆಗಳು ಪೂರ್ಣಗೊಂಡಿವೆ.
‘ಅಕ್ಷರ ಮಾಂತ್ರಿಕ’ ರವಿ ಬೆಳಗೆರೆ ಅವರು ಬರೆದಿರುವ ಕೃತಿಗಳು..!
ಕೊರೊನಾ ಸೋಂಕಿನ ಹಿನ್ನೆಲೆ ಈ ಬಾರಿ ಈ ದೀಪೋತ್ಸವದಲ್ಲಿ ಕೆಲ ಜನರಿಗೆ ಮಾತ್ರ ಅನುಮತಿಗೆ ಅವಕಾಶ ನೀಡಲಾಗುವುದು ಎಂದು ಉತ್ತರ ಪ್ರದೇಶ ಸರ್ಕಾರ ಸ್ಪಷ್ಟಪಡಿಸಿದೆ.
ನವೆಂಬರ್ 11 ರ ಸಂಜೆಯಿಂದ ಅಯೋಧ್ಯೆ ಜನರಿಗೆ ಮಾತ್ರ ಪ್ರವೇಶದ ಅನುಮತಿ ನೀಡಲಾಗಿದೆ.
ಕೊರೊನಾದ ನಡುವೆಯೂ ಆಗಸ್ಟ್ 5 ರಂದು ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿಯನ್ನು ಪೂಜಿಸಲು ಅಯೋಧ್ಯೆಗೆ ಬಂದಿದ್ದರು.
ಆ ಸಮಯದಲ್ಲಿ ಕೊರೊನಾ ಕಟ್ಟುನಿಟ್ಟನ್ನು ಮರೆತು ಭೂಮಿ ಪೂಜೆ ವೇಳೆ ಸಂಜೆ ರಾಮ್ನ ಪೈಡಿ ಕ್ಯಾಂಪಸ್ ನಲ್ಲಿ ಲಕ್ಷಾಂತರ ಜನರು ಸೇರಿದ್ದರು.
ಇಂತಹ ಪರಿಸ್ಥಿತಿಯಲ್ಲಿ ಅಯೋಧ್ಯೆಯ ಜನರನ್ನು ಈ ದೀಪೋತ್ಸವ ಕಾರ್ಯಕ್ರಮದಿಂದ ದೂರವಿಡುವುದು ರಾಜ್ಯ ಸರ್ಕಾರ ಮತ್ತು ಅಯೋಧ್ಯ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel