Ravi belagere
ತಡರಾತ್ರಿ ಹೃದಯಾಘಾತದಿಂದ ನಿಧನರಾದ ಅಕ್ಷರ ಮಾಂತ್ರಿಕ, ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕರಾದ ರವಿ ಬೆಳಗೆರೆ ಅವರಿಗೆ ಸಿಎಂ ಬಿ ಎಸ್ ಯಡಿಯೂರಪ್ಪನವರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 1980ರಲ್ಲಿ ಬರವಣಿಗೆ ಆರಂಭಿಸಿದ ಬೆಳೆಗೆರೆ ಅವರ ಕೊಡುಗೆ ಅಪಾರ. 1 ಕವನಸಂಕಲನ, 11 ಕಾದಂಬರಿ, 3 ಕಥಾ ಸಂಕಲನ, 8 ಅನುವಾದ ಕೃತಿ, 10 ಕ್ರೈಮ್ ಕೃತಿಗಳು, 11 ಐತಿಹಾಸಿಕ ಕೃತಿ, 4 ಜೀವನಕಥೆ ಸೇರಿದಂತೆ 60ಕ್ಕೂ ಹೆಚ್ಚು ಕೃತಿಗಳನ್ನ ರವಿಬೆಳೆಗೆರೆ ಅವರು ರಚಿಸಿ ಬಿಡುಗಡೆಗೊಳಿಸಿದ್ದರು.
ಇನ್ನೂ 1980ರಲ್ಲಿ ಬರವಣಿಗೆ ಪ್ರಾರಂಭಿಸಿದ ರವಿ ಬೆಳಗೆರೆ ಅವರು, 1980 ರಲ್ಲಿ ದಾರಿ, 1983ರಲ್ಲಿ ಅಗ್ನಿಕಾವ್ಯ, ಗೋಲಿಬಾರ್, ವಿವಾಹ, 1984ರಲ್ಲಿ ನಕ್ಷತ್ರ ಜಾರಿದಾಗ, 1990ರಲ್ಲಿ ಅರ್ತಿ , 1991ರಲ್ಲಿ ಪ್ಯಾಸಾ, ರಾಜೀವ್ ಹತ್ಯೆ ಯಾಕಾಯ್ತು? ಹೇಗಾಯ್ತು, 1995ರಲ್ಲಿ ಪಾ. ವೆಂ. ಹೇಳಿದ ಕಥೆ, ಪಾಪಿಗಳ ಲೋಕದಲ್ಲಿ ಭಾಗ 1, 1996 ರಲ್ಲಿ ಮಾಂಡೋವಿ, 1997ರಲ್ಲಿ ಖಾಸ್ ಬಾತ್ , ಪಾಪಿಗಳ ಲೋಕದಲ್ಲಿ ಭಾಗ 2 , 1998ರಲ್ಲಿ ಲವಲವಿಕೆ 1, ಮಾಟಗಾತಿ , ಮೈಸೂರು ಸೀರಿಯಲ್ ಕಿಲ್ಲರ್ ರವೀಂದ್ರ , 1999ರಲ್ಲಿ ಒಮರ್ಟಾ, ಹಿಮಾಲಯನ್ ಬ್ಲಂಡರ್ (ಅನುವಾದ), ಕಾರ್ಗಿಲ್ನಲ್ಲಿ 17 ದಿನ, 2000ರಲ್ಲಿ ಕಂಪನಿ ಆಫ್ ವುಮೆನ್ , ಸರ್ಪ ಸಂಬಂಧ, ಸಂಜಯ , 2001ರಲ್ಲಿ ಒಟ್ಟಾರೆ ಕಥೆಗಳು , ಟೈಮ್ ಪಾಸ್ , ಭೀಮಾ ತೀರದ ಹಂತಕರು, ಕೇಳಿ , ಪಾಪದ ಹೂವು ಫೂಲನ್ , 2002 ರಲ್ಲಿ ಮುಸ್ಲಿಮ್, ಬಾಟಂ ಐಟಂ ಭಾಗ 1, ಇಂದ್ರೆಯ ಮಗ ಸಂಜಯ, ರಾಜ ರಹಸ್ಯ, 2003ರಲ್ಲಿ ಹೇಳಿ ಹೋಗು ಕಾರಣ, ಗಾಂಧಿ ಹತ್ಯೆ ಮತ್ತು ಗೋಡ್ಸೆ, ನೀ ಹಿಂಗ ನೋಡಬ್ಯಾಡ ನನ್ನ, ಖಾಸ್ ಬಾತ್ 1999, 2000, ಬಾಟಮ್ ಐಟಂ ಭಾಗ 2, 2004ರಲ್ಲಿ ಲವಲವಿಕೆ ಭಾಗ 2, 2005ರಲ್ಲಿ ಗಾಡ್ ಫಾದರ್, ಬ್ಲ್ಯಾಕ್ ಫ್ರೈಡೇ , ಪಾಪಿಗಳ ಲೋಕದಲ್ಲಿ, 2006ರಲ್ಲಿ ಬಾಟಮ್ ಐಟಂ ಭಾಗ 3, 2007ರಲ್ಲಿ ಡಯಾನ , ಹಂತಕಿ ಐ ಲವ್ ಯೂ , ಬಡಾ ಬೆಡ್ ರೂಂ ಹತ್ಯಕಾಂಡ , ಖಾಸ್ ಬಾತ್ 2001, ರೇಷ್ಮೆ ರುಮಾಲು, ಮನಸೆ , 2008ರಲ್ಲಿ ಖಾಸ್ ಬಾತ್ 2002, ಚಲಂ , ದಂಗೆಯ ದಿನಗಳು , ಡಿ ಕಂಪನಿ , 2009ರಲ್ಲಿ ನೀನಾ ಪಾಕಿಸ್ತಾನ, ಅವನೊಬ್ಬನಿದ್ದ ಗೋಡ್ಸೆ, ಮೇಜರ್ ಸಂದೀಪ್ ಹತ್ಯೆ, ಲವಲವಿಕೆ ಭಾಗ 3, ಬಾಟಂ ಐಟಂ ಭಾಗ 4, ಫಸ್ಟ್ ಹಾಫ್, 2010 ರಲ್ಲಿ ಕಾಮರಾಜ ಮಾರ್ಗ , ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು, 2011ರಲ್ಲಿ ಬಾಟಂ ಐಟಂ ಭಾಗ 5, 6, ಲವಲವಿಕೆ ಭಾಗ 4, ಖಾಸ್ ಬಾತ್ 2003, 2004, 2012ರಲ್ಲಿ ಕನಸೆ , ಉಡುಗೊರೆ, ಹಿಮಾಗ್ನಿ ಒಲವೆ, ಅಮ್ಮ ಸಿಕ್ಕಿದ್ಳು, ಕಲ್ಪನಾ ವಿಲಾಸ , ಖಾಸ್ ಬಾತ್ 2005, ರಂಗವಿಲಾಸ್ ಬಂಗಲೆಯ ಕೊಲೆಗಳು, ಇದು ಜೀವ, ಇದುವೆ ಜೀವನ, ಪ್ರಮೋದ್ ಮಹಾಜನ್ ಹತ್ಯೆ , 2013ರಲ್ಲಿ ಏನಾಯ್ತು ಮಗಳೆ , ಬಾಟಮ್ ಐಟಂ ಭಾಗ 7, 2016 ರಲ್ಲಿ ಆತ್ಮ , 2016 – ಬಾಟಮ್ ಐಟಂ ಭಾಗ 8, ಸಮಾಧಾನ, ಖಾಸ್ ಬಾತ್ 2006, ರಾಜ್, ಲೀಲಾ, ವಿನೋದ್ , 2016 ರಲ್ಲಿ ಇಡ್ಲಿ ವಡಾ ಡೆಡ್ಲಿ ಮರ್ಡರ್ .
ರವಿ ಬೆಳಗೆರೆ ಅವರ ಬರವಣಿಗೆ ಈಗಿನ ಜೆನರೇಶನ್ ನ ಬರವಣಿಗೆಗಾರರಿಗೂ ಸ್ಪೂರ್ತಿ. ಕಾಮರಾಜ ಮಾರ್ಗ, ಡಿ ಕಂಪನಿ, ಭೀಮಾ ತೀರದ ಹಂತಕರು, ಹಿಮಾಲಯನ್ ಬ್ಲಂಡರ್, ಕಂಪನಿ ಆಫ್ ವುಮೆನ್, ಪಾಪಿಗಳ ಲೋಕದಲ್ಲಿ ಹೀಗೆ ಅತ್ಯಂತ ಪ್ರಸಿದ್ಧ ಪಡೆದ ಅವರ ಕೃತಿಗಳಲ್ಲಿ ಕೆಲವು. ಇನ್ನೂ ಬೆಳೆಗೆರೆ ಅವರ 6 ಪುಸ್ತಕಗಳು ಇನ್ನೂ ಪ್ರಕಟವಾಗಿಲ್ಲ. ಅಷ್ಟರಲ್ಲೇ ರವಿ ಬೆಳಗೆರೆ ಅವರು ಇಹಲೋಕ ತ್ಯಜಿಸಿದ್ದಾರೆ.
Ravi belagere
ಹಿರಿಯ ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ: ಅಕ್ಷರ ಲೋಕದ `ರವಿ’ ಅಸ್ತಂಗತ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel