ಐಸಿಸಿಯಿಂದ ಟೀಂ ಇಂಡಿಯಾ ಆಟಗಾರರಿಗೆ ಘನಘೋರ ಅವಮಾನ
2021ರ ಐಸಿಸಿ ಟಿ20 ತಂಡದಲ್ಲಿ ಒಬ್ಬ ಭಾರತೀಯ ಆಟಗಾರನಿಗೆ ಅವಕಾಶ ನೀಡದೆ ಅವಮಾನಿಸಿದ್ದ ಐಸಿಸಿ, ಇದೀಗ 2021 ರ ಪುರುಷರ ಏಕದಿನ ತಂಡದಲ್ಲೂ ಭಾರತೀಯ ಆಟಗಾರರಿಗೆ ಮಣೆ ಹಾಕಿಲ್ಲ. ಮೆನ್ಸ್ ಒಂಡೇ ಟೀಂ ಆಫ್ 2021ದಲ್ಲೂ ಭಾರತದ ಯಾವ ಆಟಗಾರನೂ ಕಾಣಿಸಿಕೊಂಡಿಲ್ಲ. ಅಲ್ಲದೇ ಪಾಕಿಸ್ತಾನಿ ಆಟಗಾರರಿಗೆ ಹೆಚ್ಚಾಗಿ ಮಣೆ ಹಾಕಿರುವ ಐಸಿಸಿ, ಬಾಬರ್ ಅಜಾಮ್ ಗೆ ನಾಯಕನ ಪಟ್ಟ ನೀಡಿದೆ. ಇದು ಟೀಂ ಇಂಡಿಯಾದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಐಸಿಸಿ ಏಕದಿನ ತಂಡದಲ್ಲಿ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಮತ್ತು ದಕ್ಷಿಣ ಆಫ್ರಿಕಾದ ಜನ್ನೆಮನ್ ಮಲಾನ್ ಆರಂಭಿಕರಾಗಿದ್ದಾರೆ. ಒನ್ ಡೌನ್ ನಲ್ಲಿ ಬಾಬರ್ ಆಜಾಮ್, ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಬ್ಯಾಟರ್ ಫಕರ್ ಜಮಾನ್, ಐದನೇ ಸ್ಥಾನದಲ್ಲಿ ಸೌತ್ ಆಫ್ರಿಕಾದ ಡಸ್ಸನ್ ಇದ್ದಾರೆ.
Power-hitters, terrific all-rounders, fiery pacers
![]()
The 2021 ICC Men's ODI Team of the Year has all the bases covered
pic.twitter.com/R2SCJl04kQ
— ICC (@ICC) January 20, 2022
ಆಲ್ ರೌಂಡರ್ ಕೋಟಾದಲ್ಲಿ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್, ಸಿಮಿ ಸಿಂಗ್, ವಿಕೆಟ್ ಕೀಪರ್ ಆಗಿ ಮುಷ್ಫಿಕರ್ ರಹಿಂ, ಸ್ಪಿನ್ನರ್ ಕೋಟದಲ್ಲಿ ವನಿಂದು ಹಸರಂಗ. ವೇಗದ ವಿಭಾಗದಲ್ಲಿ ಮುಸ್ಪಾಫಿಜುರ್ ರೆಹ್ಮಾನ್, ದುಷ್ಮಂತ್ ಚಮಿರಾ ಸ್ಥಾನ ಪಡೆದಿದ್ದಾರೆ.
ಐಸಿಸಿ ನಿನ್ನೆ ಪ್ರಕಟಿಸಿದ ಟಿ20 ತಂಡಕ್ಕೆ ಆರಂಭಿಕರಾಗಿ ಜೋಸ್ ಬಟ್ಲರ್ ಮತ್ತು ಮೊಹಮ್ಮದ್ ರಿಜ್ವಾನ್ ಆಯ್ಕೆಯಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಬರ್, ನಾಲ್ಕನೇ ಸ್ಥಾನದಲ್ಲಿ ಮಾರ್ಕ್ರಮ್, ಐದನೇ ಸ್ಥಾನದಲ್ಲಿ ಮಿಚೆಲ್ ಮಾರ್ಶ್, ನಂತರ ಡೇವಿಡ್ ಮಿಲ್ಲರ್,ವನಿಂದು ಹಾಸರಂಗ, ತಬ್ರೆಜ್ ಷಂಷಿ. ಜೋಶ್ ಹೆಂಜಿಲ್ ವುಡ್, ಮುಸ್ತಾಫಿಜುರ್ ರೆಹ್ಮನ್, ಶಾಹಿನ್ ಆಫ್ರಿದಿ ಸ್ಥಾನ ಪಡೆದಿದ್ದಾರೆ.