ಹಾಸನ : ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿ ಆಗುತ್ತೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ಆರ್ ಅಶೋಕ್ ಮಾತನಾಡಿ ನೂರಕ್ಕೆ ನೂರರಷ್ಟು ಯಾವುದೇ ಲಾಕ್ ಡೌನ್ ಇಡೀ ರಾಜ್ಯದಲ್ಲಿ ನಾವು ಮಾಡಲ್ಲ. ಕೂಲಿ ಕಾರ್ಮಿಕರು ಬಡವರು ಲಾಕ್ ಡೌನ್ ಗೆ ಬೆಂಬಲ ನೀಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಕಳೆದ ಹತ್ತು ದಿನಗಳಿಂದ ಎಲ್ಲ ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ನಾವು ತೆಗೆದುಕೊಳ್ಳುವ ತೀರ್ಮಾನಕ್ಕೆ ಜನ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಈ ತಿಂಗಳ ನಂತರ ಕೊರೊನಾ ಮುಗಿತು ಎಂಬಂತೆ ಇಲ್ಲ. ಈ ರೋಗದ ಬಗ್ಗೆ ಇನ್ನೂ ಆರು ತಿಂಗಳಾದರೂ ಎಚ್ಚರಿಕೆಯಿಂದ ಇರಬೇಕು. ಸ್ವಯಂ ಲಾಕ್ ಡೌನ್ ಮಾಡುವವರು ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಂತಿಲ್ಲ ಎಂದು ಸೂಚಿಸಿದ ಅಶೋಕ್, ಇಂದು ಬೆಳಿಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಂತರ ಕಠಿಣ ನಿಯಮ ಎಂದು ಹೇಳಿದ್ದೇನೆ. ಆದರೆ ಲಾಕ್ ಡೌನ್ ಅಂತ ಹೇಳಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.