ಲಾಕ್ ಡೌನ್ ಪ್ರಸ್ತಾವನೆ ಇಲ್ಲ : ಸುಧಾಕರ್ Dr K Sudakar Saaksha tv
ಬೆಂಗಳೂರು : ಅಗತ್ಯ ಬಿದ್ದರೆ ಲಾಕ್ ಡೌನ್ ತೀರ್ಮಾನ ಮಾಡುತ್ತೇವೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಲಾಕ್ ಡೌನ್ ಅಂತಹ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಎರಡೂ ಡೋಸ್ ಲಸಿಕೆ ಪ್ರತಿಯೊಬ್ಬರೂ ಪಡೆಯಬೇಕು. 18 ದೇಶಕ್ಕೆ ಒಮಿಕ್ರಾನ್ ಪತ್ತೆ ಆಗಿದೆ. ಏರ್ ಪೆÇೀರ್ಟ್ ಅಷ್ಟೇ ಅಲ್ಲ ಬಾರ್ಡರ್ ಗಳಲ್ಲಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ ಎಂದು ತಿಳಿಸಿದರು.
ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಹೇಗೆ ಮಾಡಬೇಕು. ಮನೆಯಲ್ಲೇ ಕ್ವಾರಂಟೈನ್ ಮಾಡಬಹುದಾ..? ಈ ಹೊಸ ಪ್ರಬೇಧದ ಬಗ್ಗೆ ಚರ್ಚೆ ಮಾಡ್ತೀವಿ. ಸಂಬಂಧ ಪಟ್ಟ ತಜ್ಞರ ಜೊತೆಗೆ ಚರ್ಚೆ ಮಾಡುತ್ತೇವೆ. ಹೊಸ ಪ್ರಭೇದ ತೀವ್ರವಾದರೆ ಮಾತ್ರವೇ ಕ್ರಮ. ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಶಾಲೆ, ಆರ್ಥಿಕ ಚಟುವಟಿಕೆ ಮೇಲೆ ನಿಭರ್ಂದ ಹೆರುವುದಿಲ್ಲ ಎಂದು ಸಿಎಂ ಕೂಡ ಸ್ಪಷ್ಟ ಪಡಿಸಿದ್ದಾರೆ. ಇಬ್ಬರಿಗೆ ಪಾಸಿಟಿವ್ ಆಗಿದೆ. ಅವರ ಜಿನೊಮಿಕ್ ಸಿಕ್ವೆನ್ಸ್ ಕಳುಹಿಸಲಾಗಿದೆ. ರೋಗದ ಲಕ್ಷಣ ಗಂಭೀರ ಆಗಿಲ್ಲ. ಎರಡೂ ಮೂರು ದಿನಗಳಲ್ಲಿ ವರದಿ ಬರುತ್ತೆ. ಕೇಂದ್ರ ಸರ್ಕಾರ ಹಾಗೂ Iಅಒಖ ಅಧಿಕೃತವಾಗಿ ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆ. ಇಂದು ಸಭೆ ಮಾಡಿದ ಮೇಲೆ ಸಿಎಂ ಜೊತೆಗೆ ಚರ್ಚೆ ಮಾಡಿ, ಹೊಸ ಮಾರ್ಗಸೂಚಿ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.









