ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿದ ಆಲಾಮಿ ಮರ್ಕಜ್ ಮಸೀದಿ ಈಗ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಅಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ದೇಶದ ನಾನಾ ಭಾಗಗಳ ಮುಸ್ಲಿಂ ಸಮುದಾಯದ ಜನ ಭಾಗಿದ್ದರು. ಅಲ್ಲದೆ ಹಲವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮುಸ್ಲಿಂ ಸಮುದಾಯದ ನಾಯಕರು ಸಿ.ಎಂ ಯಡಿಯೂರಪ್ಪಯವರನ್ನು ಭೇಟಿ ಮಾಡಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ, ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಅಂತ ಸಿಎಂ ಭರವಸೆ ನೀಡಿದ್ದಾರೆ. ಬೀದರ್ ನಲ್ಲಿ ಇನ್ನೂ ಕೆಲವರ ವರದಿ ಬಂದಿಲ್ಲ. ಎಲ್ಲರೂ ಸಂಪೂರ್ಣವಾಗಿ ಪರೀಕ್ಷೆಗೆ ಒಳಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಪುಗ್ಸಟ್ಟೆ ಟೆಸ್ಟ್ ಮಾಡಿಸಿಕೊಳ್ಳುವುದಕ್ಕೆ ಎನಾಗಬೇಕಿದೆ. ಯಾರ ಮೇಲ್ ಡೌಟ್ ಇದ್ದಿಯೋ ಅವರೆಲ್ಲರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ. ಜೊತೆಗೆ ನಾವು ಸಾಮೂಹಿಕ ನಮಾಜ್ ಮಾಡಲ್ಲ, ನಿಲ್ಲಿಸುತ್ತೇವೆ. ಆ ಮೂಲಕ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ. ಆದರೆ ದಿನಕ್ಕೆ 5 ಸರಿ ಆಜಾನ್ ಕೂಗಲು ಅವಕಾಶವಿದೆ. ಕೆಲವು ಕಡೆ ಮೀನುಮ ಮೊಟ್ಟೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಯಡಿಯೂರಪ್ಪನವರ ಗಮನಕ್ಕೆ ತರಲಾಗಿದೆ ಎಂದು ಇಬ್ರಾಹಿಂ ಹೇಳಿದರು
ಕೇರಳ CM ಆಯ್ಕೆ: ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದ ಕೆ.ಸಿ. ವೇಣುಗೋಪಾಲ್
ಕೆ.ಸಿ. ವೇಣುಗೋಪಾಲ್ ಅವರು ಕೇರಳ ಮುಖ್ಯಮಂತ್ರಿ ಆಯ್ಕೆ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದು, ವಿ.ಡಿ ಸತೀಶನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಯಾವುದೇ ಅಸಮಾಧಾನ ಇಲ್ಲ...








