ದೆಹಲಿ : ಭಾರತ – ಚೀನಾ ನಡುವಿನ ಗಡಿ ವಿಚಾರದಲ್ಲಿ ಎರಡು ರಾಷ್ಟ್ರಗಳಿಗೂ ಹೊರಗಿನವರ ಸಹಾಯ ಬೇಕು ಎಂದು ಅನಿಸುವುದಿಲ್ಲ ಎಂದು ರಷ್ಯಾದ ಸಚಿವರಾದ ಸರ್ಗೇ ಲಾಮ್ರೋವ್ ಹೇಳಿದ್ದಾರೆ.
ಇಂದು ಭಾರತ, ಚೀನಾ, ರಷ್ಯಾ ದೇಶಗಳ ವಿದೇಶಾಂಗ ಸಚಿವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ. ತ್ರಿಪಕ್ಷಿಯ ಸಂಬಂಧಗಳ ಬಗ್ಗೆ ಈ ಬಗ್ಗೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಷ್ಯಾ ಸಚಿವ ಸರ್ಗೇ ಲಮ್ರೋವ್ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ವಿಚಾರದಲ್ಲಿ ಹೊರಗಿನವರ ಸಹಾಯ ಬೇಕು ಎಂದು ನಾನು ಭಾವಿಸುವುದಿಲ್ಲ. ಯಾಕೆಂದರೆ ಇದು ದೇಶಗಳ ಸಮಸ್ಯೆ ಹಾಗಾಗಿ ಎರಡು ರಾಷ್ಟ್ರಗಳೇ ಬಗೆ ಹರಿಸಿಕೊಳ್ಳಬೇಕು.
ಅಲ್ಲದೆ ಗಡಿ ವಿಚಾರದಲ್ಲಿ ಏಕಪಕ್ಷೀಯ ಹೇಳಿಕೆಗಳನ್ನು ನೀಡಲ್ಲ. ಜೊತೆಗೆ ಎರಡು ರಾಷ್ಟ್ರಗಳು ರಾಜತಾಂತ್ರಿಕ ಪರಿಹಾರದ ಮಾರ್ಗದಲ್ಲಿವೆ. ಇದಕ್ಕೆ ಪೂರಕವಾಗಿ ಶಾಂತಿಯುತ ಮಾತುಕತೆ ನಡೆಸಿವೆ. ಎರಡು ರಾಷ್ಟ್ರಗಳ ಮೇಜರ್ ಜನರಲ್ ಮಟ್ಟದಲ್ಲಿ ಸಭೆ ಮಾಡಲಾಗಿದೆ. ಜೊತೆಗೆ ವಿದೇಶಾಂಗ ಸಚಿವಾಲಯದ ಮಟ್ಟಿನಲ್ಲಿ ಮಾತುಕತೆ ಆಗಿದೆ.
ಇನ್ನೂ ಸದ್ಯದ ಪರಿಸ್ಥಿತಿಯುತವಾಗಿ ಬಗೆ ಹರಿಯುತ್ತದೆ. ಸಮಸ್ಯೆ ಶಾಂತಿಯಯತವಾಗಿ ಬಗೆಹರೆಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಸರ್ಗೇ ಲಾಮ್ರೋವ್ ಹೇಳಿದ್ದಾರೆ.