ADVERTISEMENT
Tuesday, March 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಭಕ್ತರೇ ಆಸ್ತಿ, ಭಕ್ತರೇ ಹಕ್ಕುಪತ್ರ : “ಜಗದ್ಗುರುಗಳನ್ನು ಉಚ್ಚಾಟನೆ ಮಾಡೋ ಶಕ್ತಿ ಯಾರಿಗೂ ಇಲ್ಲ!” ಬಸನಗೌಡ ಯತ್ನಾಳ ಸ್ಪಷ್ಟ ಎಚ್ಚರಿಕೆ

"No one has the power to expel the Jagadgurus!" Basana Gowda Yathna's clear warning

Shwetha by Shwetha
October 6, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ವಿಜಯಪುರ:ಜಗದ್ಗುರುಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಯಾರಿಗೂ ಅಧಿಕಾರವಿಲ್ಲ, ಭಕ್ತರೇ ಅವರಿಗೆ ನಿಜವಾದ ಆಸ್ತಿ ಮತ್ತು ಹಕ್ಕುಪತ್ರ. ಸ್ವಾಮೀಜಿಗಳನ್ನು ಹೊರಹಾಕಿದವರ ಅಹಂಕಾರ ನೋಡಿದ್ದೀರಾ ಎಂದು ಟ್ರಸ್ಟ್‌ನವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ನನ್ನನ್ನು ಕಡೆಗಣಿಸಿದರೆ ರಾಜ್ಯದಲ್ಲಿ ನನ್ನ ನೇತೃತ್ವದಲ್ಲೇ ಹೊಸ ‘ಭಗವಾ ಝೇಂಡಾ’ ಸರ್ಕಾರ ರಚನೆಯಾಗಲಿದೆ ಎಂದು ಹೊಸ ರಾಜಕೀಯ ಬಾಂಬ್ ಸಿಡಿಸಿದ್ದಾರೆ.

ಮದಭಾಂವಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿಗಳ ಉಚ್ಚಾಟನೆ ವಿಚಾರವನ್ನು ತೀವ್ರವಾಗಿ ಖಂಡಿಸಿದರು. “ಯಾರಾದರೂ ಜಗದ್ಗುರುಗಳನ್ನು, ಪೂಜ್ಯರನ್ನು ಪೀಠದಿಂದ ತೆಗೆದುಹಾಕಲು ಸಾಧ್ಯವೇ? ಅವರಿಗೆ ಭಕ್ತರೇ ಆಸ್ತಿ, ಭಕ್ತರೇ ರಿಜಿಸ್ಟ್ರಾರ್, ಅವರೇ ಎಲ್ಲಾ ದಾಖಲೆ. ಇನ್ನು ಮುಂದೆ ಯಾರೂ ಗುರುಗಳನ್ನು ಉಚ್ಚಾಟನೆ ಮಾಡಿದ್ದಾರೆಂದು ಹೇಳಬೇಡಿ. ಆ ಪವರ್ ಅವರಿಗೆ ಇಲ್ಲ, ಆ ನಿಜವಾದ ಪವರ್ ಇರುವುದು ಭಕ್ತರಾದ ನಿಮಗೆ,” ಎಂದು ಜನರನ್ನುದ್ದೇಶಿಸಿ ಹೇಳಿದರು.

Related posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 3, 2026
ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

March 2, 2026

ಸ್ವಾಮೀಜಿಗಳ ಸರಳ ಜೀವನವನ್ನು ಕೊಂಡಾಡಿದ ಯತ್ನಾಳ್

ಪೀಠದ ಹಿಂದಿನ ಸ್ಥಿತಿಯನ್ನು ನೆನೆದ ಯತ್ನಾಳ್, “ಕೂಡಲಸಂಗಮ ಪೀಠದಲ್ಲಿ ಮೊದಲು ಏನೂ ಇರಲಿಲ್ಲ. ಅದೊಂದು ಸುಡುಗಾಡಿನಂತಿತ್ತು. ಅಲ್ಲಿದ್ದ ಫ್ಯಾನ್ ಹೇಗೆ ತಿರುಗುತ್ತಿತ್ತೋ ಗೊತ್ತಿಲ್ಲ. ಸ್ಪ್ರಿಂಗ್ ಹೋಗಿದ್ದ ಒಂದು ಸೋಫಾ ಇತ್ತು, ಅದರ ಮೇಲೆ ಕುಳಿತರೆ ಹಳ್ಳಕ್ಕೆ ಬಿದ್ದಂತೆ ಆಗುತ್ತಿತ್ತು. ಎಬ್ಬಿಸಲು ಇಬ್ಬರು ಬೇಕಿತ್ತು. ನಾನೇ ನೋಡಿ ಬೇರೆ ಸೋಫಾ ಕಳುಸಿಕೊಟ್ಟೆ. ಮಠದಲ್ಲಿ ಸರಿಯಾದ ಡೈನಿಂಗ್ ಟೇಬಲ್, ಮಂಚ, ಎಸಿ ಇರಲಿಲ್ಲ. ಸೊಳ್ಳೆ ಪರದೆಗೂ ತೂತು ಬಿದ್ದಿತ್ತು. ಅಂತಹ ಕಷ್ಟದ ಸ್ಥಿತಿಯಲ್ಲಿದ್ದ ಮಠವನ್ನು ಸ್ವಾಮೀಜಿಗಳು ಅಭಿವೃದ್ಧಿಪಡಿಸಿ, ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ಅಂಥವರನ್ನು ಇಂದು ಉಚ್ಚಾಟನೆ ಮಾಡಿದ್ದಾರೆ. ಹೀಗೆ ಮಾಡಿದವರ ಸೊಂಡಿ ನೋಡಿ ಹೇಗಿದೆ,” ಎಂದು ಹೆಸರು ಹೇಳದೆ ಟ್ರಸ್ಟ್‌ನವರ ವಿರುದ್ಧ ವ್ಯಂಗ್ಯವಾಡಿದರು.

ಸಂತರಾದವರಿಗೆ ಆಸ್ತಿಯ ವ್ಯಾಮೋಹ ಇರಬಾರದು ಎಂಬುದಕ್ಕೆ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ ಆದರ್ಶವನ್ನು ಯತ್ನಾಳ್ ಸ್ಮರಿಸಿದರು. “ನಾವು ಸಿದ್ದೇಶ್ವರ ಶ್ರೀಗಳನ್ನು ನೋಡಿದ್ದೇವೆ. ಅವರ ಅಂಗಿಗೆ ಜೇಬು ಇರಲಿಲ್ಲ. ಬಟ್ಟೆ ಹರಿದರೆ ತಾವೇ ಹೊಲಿದುಕೊಳ್ಳುತ್ತಿದ್ದರು. ಚಪ್ಪಲಿ ಸವೆದರೂ ಅದನ್ನೇ ಹಾಕುತ್ತಿದ್ದರು. ಸ್ವಂತ ಕಾರು ಕೂಡ ಇಟ್ಟುಕೊಂಡಿರಲಿಲ್ಲ. ಅಂಥವರು ನಿಜವಾದ ಸಂತರು,” ಎಂದರು.

ನನ್ನದೇ ಹೊಸ ಪಕ್ಷ, ಯೋಗಿ ಮಾದರಿ ಆಡಳಿತ

ಸಮಾವೇಶದಲ್ಲಿ ಶಾಸಕ ಸಿದ್ದು ಸವದಿ ಅವರತ್ತ ತಿರುಗಿ ಮಾತನಾಡಿದ ಯತ್ನಾಳ್, “ಸಿದ್ದು ಅಣ್ಣ, ಒಂದು ವೇಳೆ ನನ್ನನ್ನು ಬಿಜೆಪಿಗೆ ತೆಗೆದುಕೊಳ್ಳದಿದ್ದರೆ, ನಾವು ನಮ್ಮದೇ ಆದ ‘ಭಗವಾ ಝೇಂಡಾ’ ಪಕ್ಷವನ್ನು ಸ್ಥಾಪಿಸುತ್ತೇವೆ. ರಾಜ್ಯದಲ್ಲಿ ನನ್ನ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗುವುದು ನಿಶ್ಚಿತ. ಆಗ ನೀವು ನಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಟಿವಿಯಲ್ಲಿ ನೋಡಬೇಕಾಗುತ್ತದೆ,” ಎಂದು ಹಾಸ್ಯದ ಮೂಲಕವೇ ಎಚ್ಚರಿಕೆ ರವಾನಿಸಿದರು.

“ನಾನು ಅಧಿಕಾರಕ್ಕೆ ಬಂದರೆ, ಪ್ರಮಾಣ ವಚನ ಸ್ವೀಕಾರದ ದಿನವೇ 11 ಜೆಸಿಬಿಗಳಿಗೆ ಪೂಜೆ ನಡೆಯಲಿದೆ. ದೇಶದ ವಿರುದ್ಧ ಮಾತನಾಡುವವರ ವಿರುದ್ಧ ಉತ್ತರ ಪ್ರದೇಶದ ಯೋಗಿ ಅಣ್ಣನ ಮಾದರಿಯಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಗೂ ಜೆಸಿಬಿ ಬೇಕು, ಕಾಲುವೆ ತೋಡಲೂ ಜೆಸಿಬಿ ಬೇಕು. ರಾಜ್ಯದಲ್ಲಿ ಜೆಸಿಬಿ ಘರ್ಜನೆ ಶುರುವಾಗಲಿದೆ,” ಎಂದು ಯೋಗಿ ಮಾದರಿ ಆಡಳಿತದ ಮುನ್ಸೂಚನೆ ನೀಡಿದರು.

ShareTweetSendShare
Join us on:

Related Posts

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 3, 2026
0

ದಿನ ಭವಿಷ್ಯ: 03-03-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಬಹಳ ಉತ್ಸಾಹದಾಯಕ ದಿನವಾಗಿದೆ. ರಾಶ್ಯಾಧಿಪತಿ ಕುಜನು ಅನುಕೂಲಕರ ಸ್ಥಾನದಲ್ಲಿರುವುದರಿಂದ ನಿಮ್ಮ ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ....

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ದೆವು, ಈಗ ರಾಜ್ಯದಲ್ಲಿ ವಿರೋಧ ಪಕ್ಷವೇ ಸತ್ತು ಹೋಗಿದೆ: ಕೆ ಎಸ್ ಈಶ್ವರಪ್ಪ

by Shwetha
March 2, 2026
0

ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ವಿರೋಧ ಪಕ್ಷವೇ ಇಲ್ಲದಂತಾಗಿದೆ, ಅದು...

ಬಜೆಟ್ 2026 ರಾಜ್ಯದ ಅಭಿವೃದ್ಧಿಗೆ 13 ಸೂತ್ರಗಳು ಘೋಷಣೆಯಾಗಲಿದೆಯೇ ಈ ಜನಪ್ರಿಯ ಯೋಜನೆಗಳು

ಸಿದ್ದು ಲೆಕ್ಕ : ಗ್ಯಾರಂಟಿ ಯೋಜನೆಗಳ ಭವಿಷ್ಯವೇನು 2026ರ ಕರ್ನಾಟಕ ಬಜೆಟ್ ಮಹಾ ಲೆಕ್ಕಾಚಾರ ಇಲ್ಲಿದೆ

by Shwetha
March 2, 2026
0

ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಆಯವ್ಯಯ ಮಂಡನೆಗೆ ಸಜ್ಜಾಗಿದ್ದಾರೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿರಲಿದ್ದು,...

ಅಂಗನವಾಡಿ ಹುದ್ದೆಗಳಿಗೆ ಬೃಹತ್ ನೇಮಕಾತಿ: ಪರೀಕ್ಷೆ ಇಲ್ಲದೆ ನೇರ ಉದ್ಯೋಗ ಪಡೆಯುವ ಸುವರ್ಣಾವಕಾಶ

ಅಂಗನವಾಡಿ ಹುದ್ದೆಗಳಿಗೆ ಬೃಹತ್ ನೇಮಕಾತಿ: ಪರೀಕ್ಷೆ ಇಲ್ಲದೆ ನೇರ ಉದ್ಯೋಗ ಪಡೆಯುವ ಸುವರ್ಣಾವಕಾಶ

by Shwetha
March 2, 2026
0

ಕಲಬುರಗಿ: ಜಿಲ್ಲೆಯ ಮಹಿಳಾ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಕಲಬುರಗಿ ಜಿಲ್ಲೆಯಾದ್ಯಂತ ಖಾಲಿ ಇರುವ ಒಟ್ಟು 412...

ಬೆಂಗಳೂರಿಗರೇ ಎಚ್ಚರ ಇನ್ಮುಂದೆ ಮಿಶ್ರ ಕಸ ನೀಡಿದರೆ ಬೀಳುತ್ತೆ ಭಾರೀ ದಂಡ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ ಬಿಎಸ್‌ಡಬ್ಲ್ಯೂಎಂಎಲ್

ಬೆಂಗಳೂರಿಗರೇ ಎಚ್ಚರ ಇನ್ಮುಂದೆ ಮಿಶ್ರ ಕಸ ನೀಡಿದರೆ ಬೀಳುತ್ತೆ ಭಾರೀ ದಂಡ ತ್ಯಾಜ್ಯ ವಿಂಗಡಣೆ ಕಡ್ಡಾಯಗೊಳಿಸಿದ ಬಿಎಸ್‌ಡಬ್ಲ್ಯೂಎಂಎಲ್

by Shwetha
March 2, 2026
0

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ನಿವಾರಣೆಗೆ ಇದೀಗ ಆಡಳಿತ ವ್ಯವಸ್ಥೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಇನ್ನು ಮುಂದೆ ಮನೆಯಿಂದ ಕಸ ನೀಡುವಾಗ ಹಸಿ ಮತ್ತು ಒಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram