ಬ್ಯಾಂಕ್ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆದಾಯ ವೃದ್ಧಿಗೆ ದಂಡ ಬಡ್ಡಿ ಹೇರಿಕೆಯನ್ನೇ ಸಾಧನವನ್ನಾಗಿ ಮಾಡಿಕೊಂಡಿರುವುದು ಕಳವಳ ಸಂಗತಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ದಂಡ ಬಡ್ಡಿಯನ್ನು ನಿಷೇಧಿಸಿದೆ
ಸಾಲ ಮರುಪಾವತಿಗೆ ವಿಫಲರಾದರೆ ದಂಡ ಬಡ್ಡಿಗೆ ಬದಲಾಗಿ ತರ್ಕಬದ್ಧವಾದ ದಂಡ ಶುಲ್ಕ ಮಾತ್ರ ಹೇರಬಹುದು. ದಂಡ ಬಡ್ಡಿ ಹೇರಿಕೆ ಮೇಲಿನ ನಿಷೇಧ 2024ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಆರ್ ಬಿಐ ಹೊರಡಿಸಿದ ಅಧಿಸೂಚನೆಯಲ್ಲಿ ಸೂಚಿಸಿದೆ.
ಒಪ್ಪಂದವನ್ನು ಪಾಲಿಸದ ಸಾಲಗಾರರಿಗೆ ಒಂದು ವೇಳೆ ದಂಡ ವಿಧಿಸಿದರೆ ಅದನ್ನು ದಂಡ ಶುಲ್ಕ ಎಂದು ಪರಿಗಣಿಸಬೇಕು. ಸಾಲದ ಬಡ್ಡಿಗೆ ಸೇರಿಸುವ ದಂಡ ಬಡ್ಡಿ ರೂಪದಲ್ಲಿ ಹೇರಬಾರದು ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟ ಸೂಚನೆ ನೀಡಿದೆ.
ಈ ಸೂಚನೆಗಳು ಕ್ರೆಡಿಟ್ ಕಾರ್ಡ್ಗಳು, ಬಾಹ್ಯವಾಣಿಜ್ಯ ಸಾಲಗಳು, ಟ್ರೇಡ್ ಕ್ರೆಡಿಟ್ಗಳಿಗೆ ಅನ್ವಯವಾಗುವುದಿಲ್ಲ ಎಂದು ಆರ್ ಬಿಐ ಹೇಳಿದೆ.
ಸಮಾನ ಮಾಸಿಕ ಕಂತು (ಇಎಂಐ) ಮೂಲಕ ಸಾಲ ಮರುಪಾವತಿ ಮಾಡುವ ವೈಯಕ್ತಿಕ ಸಾಲಗಾರರಿಗೆ ನಿಗದಿತ (ಫಿಕ್ಸೆಡ್) ಬಡ್ಡಿ ದರ ವ್ಯವಸ್ಥೆ ಅಥವಾ ಸಾಲದ ಅವಧಿ ವಿಸ್ತರಿಸುವ ಆಯ್ಕೆಯನ್ನು ಒದಗಿಸುವಂತೆ ಬ್ಯಾಂಕ್ಗಳಿಗೆ ನಿರ್ದೇಶನ ನೀಡಿದೆ.