ಮೈಸೂರು: ಈ ವರ್ಷ ಶಾಲಾ ಪಠ್ಯ ಪರಿಷ್ಕರಣೆ (School Text Revision) ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ (Mysuru) ಮಾತನಾಡಿರುವ ಸಚಿವರು, ಪಠ್ಯದ ವಿಷಯದಲ್ಲಿ ಕಳೆದ ಬಾರಿಯೇ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ತಪ್ಪಿದ್ದ ಪದಗಳನ್ನು ಸರಿ ಮಾಡಲಾಗಿದೆ ಅಷ್ಟೇ ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ನಾಳೆಯಿಂದ ಆರಂಭವಾಗಲಿ ವೆ. ಮೊದಲ ದಿನ ಮಕ್ಕಳನ್ನು ಆತ್ಮೀಯವಾಗಿ ಬರ ಮಾಡಿಕೊಂಡು ಸಿಹಿಯೂಟ ನೀಡಬೇಕೆಂದು ಶಿಕ್ಷಣ ಇಲಾಖೆ ತಿಳಿಸಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹೆಸರುಬೇಳೆ ಪಾಯಸ, ಕೇಸರಿಬಾತ್ ಇಲ್ಲವೇ ಯಾವುದಾದರೊಂದು ಸಿಹಿಯನ್ನು ನೀಡಲಾಗುತ್ತದೆ. ಮೊದಲ ದಿನವೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲು ಶಿಕ್ಷಣ ಇಲಾಖೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.