ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಜಾಯ್ ಮದುವೆ….
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್ಜಾಯ್ ಯುನೈಟೆಡ್ ಕಿಂಗ್ಡಂನಲ್ಲಿರುವ ತಮ್ಮ ಮನೆಯಲ್ಲಿ ವಿವಾಹವಾದರು.
ಕೇವಲ 15 ವರ್ಷದವಳಿದ್ದಾಗ ಪಾಕಿಸ್ತಾನದ ತಾಲಿಬಾನ್ ಉಗ್ರರಿಂದ ಗುಂಡೆಟು ತಿಂದು ಬದುಕುಳಿದಿದ್ದರು. ನಂತರ ಸಾಮಾಜಿಕ ಹೋರಾಟಗಾರ್ತಿಯಾಗಿ ಬದಲಾಗಿದ್ದರು. ಮಲಾಲ ಯೂಸುಫ್ಜಾಯ್, ಟ್ವಿಟರ್ನಲ್ಲಿ ಸುದ್ದಿಯನ್ನು ಪ್ರಕಟಿಸಿ, ನಿಕ್ಕಾ ಎಂದು ಕರೆಯಲ್ಪಡುವ ಇಸ್ಲಾಮಿಕ್ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ಅಸ್ಸರ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು. “ಇವತ್ತು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ” ಎಂದು 24 ವರ್ಷ ವಯಸ್ಸಿನ ಮಲಾಲ ಬರೆದುಕೊಂಡಿದ್ದಾರೆ.
“ನಾವು ನಮ್ಮ ಕುಟುಂಬದೊಂದಿಗೆ ಬರ್ಮಿಂಗ್ಹ್ಯಾಮ್ನಲ್ಲಿರುವ ಮನೆಯಲ್ಲಿ ಸಣ್ಣ ನಿಕ್ಕಾ ಸಮಾರಂಭವನ್ನು ಆಚರಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರಾರ್ಥನೆಗಳನ್ನು ನಮಗೆ ಕಳುಹಿಸಿ. ಮುಂದಿನ ಪ್ರಯಾಣಕ್ಕಾಗಿ ನಾವು ಒಟ್ಟಿಗೆ ನಡೆಯಲು ಉತ್ಸುಕರಾಗಿದ್ದೇವೆ.” ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾವಿರಾರು ಜನರು ಶುಭ ಹಾರೈಕೆಗಳು ಮತ್ತು ಅಭಿನಂದನೆಗಳೊಂದಿಗೆ ಪ್ರತಿಕ್ರಿಯಿಸಿದರು, ಟ್ವೀಟರ್ ನಲ್ಲಿ 227,000 ಕ್ಕೂ ಹೆಚ್ಚು ‘ಲೈಕ್’ ಒತ್ತಿದ್ದಾರೆ.
ಯೂಸುಫ್ಜಾಯ್ ತನ್ನ ಪತಿಯ ಬಗ್ಗೆ ಬೇರೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಹೈ ಪರ್ಫಾರ್ಮೆನ್ಸ್ ಸೆಂಟರ್ನ ಜನರಲ್ ಮ್ಯಾನೇಜರ್ ಅಸರ್ ಮಲಿಕ್ ಎಂದು ಗುರುತಿಸಿದ್ದಾರೆ.
Today marks a precious day in my life.
Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead.
📸: @malinfezehai pic.twitter.com/SNRgm3ufWP— Malala (@Malala) November 9, 2021