ಕಾದಂಬರಿಗಾರ ಅಬ್ದುಲ್ ರಜಾಕ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ Abdul Razak saaksha tv
ಸ್ಟಾಕ್ಹೋಮ್ : ತಾಂಜೇನಿಯಾದ ಕಾದಂಬರಿಕಾರ ಅಬ್ದುಲ್ ರಜಾಕ್ ಗುರ್ನಾಹ್ ಅವರಿಗೆ 2021ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಸಿಕ್ಕಿದೆ.
1948ರಲ್ಲಿ ಅಬ್ದುಲ್ ರಜಾಕ್ ಅವರು ಹಿಂದೂ ಮಹಾಸಾಗರದ ಜಂಜಿಬಾರ್ ದ್ವೀಪದಲ್ಲಿ ಜನಸಿದರು.
1960ರ ದಶಕದ ಕೊನೆಯಲ್ಲಿ ಇಂಗ್ಲೆಂಡ್ ಗೆ ನಿರಾಶ್ರಿತರಾಗಿ ಬಂದ ಅಬ್ದುಲ್ ರಜಾಕ್ ಅವರು, ಹತ್ತು ಕಾದಂಬರಿ ಹಾಗೂ ಅನೇಕ ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ.
ಕ್ಯಾಂಟರ್ಬರಿಯ ಕೆಂಟ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ವಸಾಹತುಶಾಹಿ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದ ಅಬ್ದುಲ್ ಅವರು ವಸಾಹತುಶಾಹಿಯ ಪರಿಣಾಮಗಳು, ಸಂಸ್ಕೃತಿಗಳು ಮತ್ತು ನಿರಾಶ್ರಿತರ ಭವಿಷ್ಯದ ಬಗ್ಗೆ ಕೃತಿಗಳನ್ನು ಬರೆದಿದ್ದಾರೆ.
ಸದ್ಯ ಅಬ್ದುಲ್ ಅವರ ವಸಾಹತುಶಾಹಿಯ ಪರಿಣಾಮಗಳು, ಸಂಸ್ಕೃತಿಗಳು ಮತ್ತು ನಿರಾಶ್ರಿತರ ಭವಿಷ್ಯದ ವಿಚಾರವಾಗಿ ಬರೆದಿರುವ ಕೃತಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಲಭ್ಯವಾಗಿದೆ.