ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಗೆ ಬೆಂಬಲ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಕನ್ಹಯ್ಯ ಲಾಲ್ ಅವರ ಬರ್ಬರ ಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ… ನೂಪುರ್ ಗೆ ಬೆಂಬಲ ಸೂಚಿಸಿದ್ದ ಯುವಕನಿಗೆ ಕಿಡಿಗೇಡಿಗಳು ಚಾಕು ಇರಿದಿದ್ದಾರೆ..
ನೂಪುರ್ ಗೆ ಬೆಂಬಲ ಸೂಚಿಸಿ ವಾಟ್ಸಾಪ್‍ನಲ್ಲಿ ವೀಡಿಯೋ ಶೇರ್ ಮಾಡಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬಿಹಾರದ ಸೀತಾಮರ್ಹಿಯಲ್ಲಿ ನಡೆದಿದೆ.
ಜುಲೈ 15ರ ಸಂಜೆ ಪಾನ್ ಶಾಪ್‍ನಲ್ಲಿ ಗುಂಪೊಂದು ಅಂಕಿತ್ ಝಾ ಜೊತೆಗೆ ಜಗಳವಾಡಿದ್ದು, ಈ ವೇಳೆ ಚಾಕು ಇರಿದು ಪರಾರಿಯಾಗಿದೆ.. ಅಂಕಿತ್ ಝಾ ದರ್ಭಾಂಗಾದ ಸ್ಥಳೀಯ ನರ್ಸಿಂಗ್ ಹೋಮ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೂಪುರ್ ಶರ್ಮಾ ಅವರ ವೀಡಿಯೊವನ್ನು ವಾಟ್ಸಾಪ್ ಸ್ಟೇಟಸ್ ಗೆ ಅಂಕಿತ್ ಝಾ ಅಪ್‍ಲೋಡ್ ಮಾಡಿದ್ದರು. ಇದೇ ವೀಡಿಯೋವನ್ನು ವೀಕ್ಷಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ತನ್ನೊಂದಿಗೆ ಗಲಾಟೆ ಮಾಡಿದ್ದು, ನಂತರ ಯಾರೋ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಅಂಕಿತ್ ಝಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.
ಯುವಕ ನಾಲ್ವರ ಮೇಲೆ ದೂರು ದಾಖಲಿಸಿದ್ದು, ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.









