Nora Fatehi : ಗೆಳತಿಯಾಗಲು ಒಪ್ಪಿಕೊಂಡರೇ ದುಬಾರಿ ಮನೆ ಗಿಫ್ಟ್ – ನೂರಾ ಫತೇಯಿಗೆ ಆಸೆ ತೋರಿಸಿದ್ದ ಸುಕೇಶ್…
ಸುಕೇಶ್ ಚಂದ್ರಶೇಖರ್ ಗೆಳತಿಯಾಗಲು ಒಪ್ಪಿಕೊಂಡರೇ ದೊಡ್ಡ ಮನೆಯನ್ನ ಗಿಫ್ಟ್ ಆಗಿ ನೀಡುವ ಭರವಸೆ ನೀಡಿದ್ದ ಎಂಬ ವಿಷಯವನ್ನ ಬಾಲಿವುಡ್ ನಟಿ ಮತ್ತು ಮಾಡೆಲ್ ನೋರಾ ಫತೇಹಿ ಇದೀಗ ಬಹಿರಂಗಪಡಿಸಿದ್ದಾರೆ. ಸುಕೇಶ್ ಚಂದ್ರಶೇಖರ್ 215 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ನಿಮಗೆ ಗೊತ್ತೇ ಇದೆ.
ನೋರಾ ಫತೇಹಿ, ಜಾಕ್ವೆಲಿನ್ ಫರ್ನಾಂಡೀಸ್, ನಿಕ್ಕಿ ತಾಂಬೋಲಿ ಮತ್ತು ಚಾಹತ್ ಖನ್ನಾ ಅವರಂತಹ ನಾಯಕಿಯರು ಚಂದ್ರಶೇಖರ್ ನೊಂದಿಗೆ ಕೆಲ ಸಮಯದವರೆಗೆ ನಿಕಟವಾಗಿದ್ದರು ಎಂದು ಶಂಕಿಸಲಾಗಿದೆ. ಆ ವೇಳೆ ಸುಕೇಶ್ ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿಯರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಇತ್ತೀಚೆಗೆ ನೋರಾ ಫತೇಹಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಸುಕೇಶ್ ಚಂದ್ರಶೇಖರ್ ವಿರುದ್ಧ ಸೆನ್ಸೇಷನಲ್ ಆರೋಪ ಮಾಡಿದ್ದರು. “ಸುಕೇಶ್ ನನ್ನನ್ನ ಬಯಸಿದ್ದರು. ನಾನು ಅವರ ಗೆಳತಿಯಾಗಿದ್ದರೆ ನನಗೆ ದುಬಾರಿ ಮನೆ ಕೊಡಿಸುವುದಾಗಿ ಆಸೆ ತೋರಿಸಿದ್ದರು. ಮೇಲಾಗಿ.. ಐಷಾರಾಮಿ ಜೀವನಶೈಲಿ ಇರುತ್ತದೆ ಎಂದಿದ್ದರು. ಆದರೆ, ನಾನು ಸುಕೇಶ್ ಅವರನ್ನು ನೇರವಾಗಿ ಭೇಟಿಯಾಗಿರಲಿಲ್ಲ. ಅವರು ತಮ್ಮ ಸಹಾಯಕಿ ಪಿಂಕಿ ಇರಾನಿ ಅವರ ಮೂಲಕ ಈ ಪ್ರಸ್ತಾಪವನ್ನ ತಂದಿದ್ದರು. ಅವನು ಯಾರೆಂದು ನನಗೆ ಗೊತ್ತಿಲ್ಲ. ಅವನೊಂದಿಗೆ ವೈಯಕ್ತಿಕವಾಗಿ ಮಾತನಾಡಿಲ್ಲ. ಇ ಡಿ ಅಧಿಕಾರಿಗಳು ನನ್ನ ಮುಂದೆ ವಿಚಾರಣೆ ನಡೆಸಿದಾಗ ನಾನು ಅವರನ್ನು ಮೊದಲ ಬಾರಿಗೆ ನೋಡಿದೆ ಎಂದು ನೋರಾ ಫತೇಹಿ ಪಟಿಯಾಲ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
Nora Fatehi : sukesh chandrashekhar promised big house luxurious lifestyle if i agreed to be his girlfriend nora fatehi tells court








