ನಮಗೆ ಶಸ್ತ್ರಾಸ್ತ್ರಗಳನ್ನ ಪರೀಕ್ಷಿಸುವ ಹಕ್ಕಿದೆ ಎಂದ ಉತ್ತರ ಕೊರಿಯಾ..!
ಉತ್ತರ ಕೊರಿಯಾದ ಹುಚ್ಚ ಸಾಮ್ರಾಟ ಕಿಮ್ ಜಾಂಗ್ ಉನ್ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ದೇಶದ ಜನರ ಹಿತಾಸಕ್ತಿಗಿಂತಲೂ ಈತನಿಗೆ ಅಣು ಬಾಂಬ್ ಗಳ ತಯಾರಿಕೆ ಮೇಲೆಯೇ ಆಸಕ್ತಿ ಹೆಚ್ಚು. ಅಲ್ಲದೇ ಉತ್ತರ ಕೊರಿಯಾ ಆಗಾಗ ಅಣ್ವಸ್ತ್ರಗಳನ್ನ ಪರೀಕ್ಷೆ ಮಾಡುತ್ತಾ ಇತರೇ ದೇಶಗಳನ್ನ ಹೆದರಿಸುವ ಪ್ರಯತ್ನವನ್ನೂ ಮಾಡುತ್ತಲೇ ಇರುತ್ತೆ.
ಇದೀಗ ಈ ಬಗ್ಗೆ ಉತ್ತರ ಕೊರಿಯಾ ರಾಯಭಾರಿ ಮಾತನಾಡಿ ನಮ್ಗೆ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ಹಕ್ಕು ಇದೆ. ಇದನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಉತ್ತರಿಸಿದ್ದಾರೆ. ಉತ್ತರ ಕೊರಿಯಾ ಗುರುತು ಸಿಗದ ಕ್ಷಿಪಣಿಯೊಂದರ ಪರೀಕ್ಷೆಯನ್ನು ನಡೆಸಿದೆ. ಪೂರ್ವ ಸಮುದ್ರದತ್ತ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದೆ. ಆದರೆ ಕ್ಷಿಪಣಿಯು ಯಾವ ಮಾದರಿಯದ್ದು ಅದರ ಸಾಮರ್ಥ್ಯವೇನು ಎಂಬುದು ತಿಳಿದು ಬಂದಿಲ್ಲ ಎಂದು ದಕ್ಷಿಣ ಕೊರಿಯಾದ ಸೇನೆ ಇತ್ತೀಚೆಗೆ ತಿಳಿಸಿತ್ತು.
ಬೂಸ್ಟರ್ ಲಸಿಕೆ ಪಡೆದ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್
ಈ ಆರೋಪದ ಬೆನ್ನಲ್ಲೇ ದಕ್ಷಿಣ ಕೊರಿಯಾ ಆರೋಪ ಮಾಡಿದ ಬೆನ್ನಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉತ್ತರ ಕೊರಿಯಾದ ರಾಯಭಾರಿ ಈ ಉತ್ತರ ನೀಡಿದ್ದಾರೆ. ಅಲ್ಲದೇ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಶಾಂತಿ ಸ್ಥಿರತೆಗೆ ರಾಷ್ಟ್ರ ಭದ್ರತೆಗೆ ರಕ್ಷಣಾ ಪಡೆಯನ್ನು ಈಗ ಬಲಗೊಳಿಸುತ್ತಿದ್ದೇವೆ ಎಂದು ಕಿಮ್ ಸಾಂಗ್ ಹೇಳಿಕೊಂಡಿರೋದಾಗಿ ವರದಿಯಾಗಿದೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ರಾಜೀನಾಮೆ