IPL 2022 | 150 KM ವೇಗದಲ್ಲಿ ಬಂದ ಚೆಂಡು.. ಸಿಕ್ಸರ್ ಬಾರಿಸಿದ ಡಿಕಾಕ್
1 min read
IPL 2022 | 150 KM ವೇಗದಲ್ಲಿ ಬಂದ ಚೆಂಡು.. ಸಿಕ್ಸರ್ ಬಾರಿಸಿದ ಡಿಕಾಕ್
ಭಾರತದಲ್ಲಿ ಮೊದಲ ಮ್ಯಾಚ್ ಆಡುತ್ತಿರುವ ಅನ್ರಿಜ್ ನೋರ್ಟಜೆ ತಮ್ಮ ವೇಗದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ಕ್ವಿಂಟನ್ ಡಿ ಕಾಕ್ ಅವರಿಗೆ ಶಾಕ್ ನೀಡಿದ್ದಾರೆ.
ಆದ್ರೆ ಈ ಶರವೇಗದ ಎಸೆತವನ್ನ ಕ್ವಿಂಟನ್ ಡಿ ಕಾಕ್ ಸಿಕ್ಸರ್ ಬಾರಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಲಕ್ನೋ ತಂಡದ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಈ ಘಟನೆ ನಡೆದಿದೆ.
14ನೇ ಓವರ್ ನ ಮೊದಲ ಎಸೆತವನ್ನ 150 ಕಿಲೋ ಮೀಟರ್ ವೇಗದಲ್ಲಿ ಎಸೆದರು.
ಆ ಎಸೆತವನ್ನ ಕಣ್ಣು ಮುಚ್ಚಿ ತೆಗೆಯೋದ್ರಲ್ಲಿ ಡಿಕಾಕ್ ಬೌಂಡರಿ ಗೆರೆ ದಾಟಿಸಿದರು.
ಆದ್ರೆ ತಾನು ಹೊಡೆದಿದ್ದು ಸಿಕ್ಸರ್ ಅಂತಾ ಸ್ವತಃ ಡಿ ಕಾಕ್ ಅವರಿಗೇನೇ ಗೊತ್ತಿರುವುದಿಲ್ಲ.
ಯಾಕಂದ್ರೆ ಗಂಟೆಗೆ ನೂರೈವತ್ತು ವೇಗದದಲ್ಲಿ ಬಂದ ಚೆಂಡಿನಿಂದ ತಪ್ಪಿಸಿಕೊಳ್ಳಲು ಡಿ ಕಾಕ್ ಬ್ಯಾಟ್ ಅನ್ನು ಮುಖಕ್ಕೆ ಅಡ್ಡ ಇಟ್ಟುಕೊಂಡರು.
ಅದು ಬ್ಯಾಟ್ ಗೆ ತಗುಲಿ ಸಿಕ್ಸರ್ ಹೋಯ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. Nortje-150-km-speed-beamer-quinton-de-kock-hits-super-six