‘ಸೂರ್ಯ ಮುಳುಗದ ರಾಷ್ಟ್ರ’… ಕಣ್ಣು ಹಾಯಿಸಿದಲ್ಲೆಲ್ಲಾ ಸುಂದರ ತಾಣಗಳು… ಈ ದೇಶ ಭೂಲೋಕದ ಸ್ವರ್ಗ..!
ವಿಶ್ವದಲ್ಲಿ ಅತ್ಯಂತ ಶಾಂತ ಸ್ವಭಾವದ ಜನರು ಇರುವ ದೇಶ ಯಾವುದು ಗೊತ್ತಾ..? ಮಧ್ಯ ರಾತ್ರಿಯಲ್ಲೂ ಸೂರ್ಯ ಕಾಣಿಸುವ ದೇಶ ಯಾವುದು ಗೊತ್ತಾ..? ವಿಶ್ವದ ಅತಿ ಉದ್ದದ ಅಂಡರ್ ಪಾಸಿಂಗ್ ಟನಲ್ ಇರೋ ದೇಶ ಯಾವುದು ಗೊತ್ತಾ..? ಈ ದೇಶದ ಪ್ರಾಕೃತಿಕ ಸೌಂದರ್ಯಕ್ಕೆ ಕಳೆದು ಹೋಗದವರಿಲ್ಲ.. ಇಷ್ಟೆಲ್ಲಾ ವಿಶೇಷತೆಗಳನ್ನ ಒಳಗೊಂಡಿರುವ ಪ್ರಾಕೃತಿಕ ಸೌಂದರ್ಯದಿಂದ ಜನರನ್ನ ಆಕರ್ಶಿಸುವ ದೇಶ ನಾರ್ವೆ…. ಅಧಿಕೃತ ಹೆಸರು ಕಿಂಗ್ ಡಮ್ ಆಫ್ ನಾರ್ವೆ .. ರಾಜಧಾನಿ ಓಸ್ಲೋ.. ಅಧಿಕೃತ ಭಾಷೆ ನಾರ್ವಿಗಿಯನ್..
ಯೂರೋಪ್ ನಲ್ಲಿ ಸ್ಥಿತವಾಗಿರುವ ಈ ದೇಶವನ್ನ , ಇಲ್ಲಿನ ಪ್ರಾಕೃತಿಕ ಸೌಂದರ್ಯ ,ವಾತಾವರಣದಿಂದಾಗಿ ಭೂಲೋಕ ಸ್ವರ್ಗ ಎಂದೇ ಕರೆಯಲಾಗುತ್ತೆ.. ಕಣ್ಣು ಹಾಯಿಸಿದಲ್ಲೆಲ್ಲಾ ಸುಂದರ ತಾಣಗಳು , ರಮಣೀಯ ನೋಟ ಇಲ್ಲಿಗೆ ವಿದೇಶಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತೆ. ಈ ದೇಶ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ರು, ಇಲ್ಲಿನ ಜನಸಂಖ್ಯೆ ಕಡಿಮೆ.. ಅಂದ್ರೆ ಸುಮಾರು 5.4 ಮಿಲಿಯನ್.
ಈ ದೇಶದಲ್ಲಿ ನಗರಗಳ ಹೊರಗಡೆ ಕೇವಲ ಬೆಟ್ಟ ಗುಡ್ಡ ಅಲ್ಲಲ್ಲಿ ಹರಿಯುವ ಝರಿ , ಜಲಪಾತ , ಹಸಿರಿನಿಂದ ಸುತ್ತವರೆದ ವಾತಾವರಣವೇ ಕಾಣಸಿಗುತ್ತದೆ.. ಆಶ್ಚರ್ಯ ಅಂದ್ರೆ ಈ ದೇಶದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ದ್ವೀಪಗಳು ಇವೆ.. ಅನೇಕ ದ್ವೀಪಗಳು ಜನ ನಿಬಿಡವಾಗಿವೆ.. ಎಷ್ಟೋ ವರ್ಷಗಳಿಂದ ಅಲ್ಲಿ ಜನರು ವಾಸವಾಗಿಲ್ಲ.. ನಾರ್ವೆಯಲ್ಲಿ ಮಹಿಳೆಯರನ್ನ ಎಲ್ಲ ತರಹದ ಕೆಲಸ ಕಾರ್ಯಗಳಲ್ಲಿ ಶಾಮೀಲು ಮಾಡಿಕೊಳ್ಳಲಾಗುತ್ತದೆ.. ಮಹಿಳೆಯರು ಸೇನೆಯಿಂದ ಹಿಡಿದು ಟ್ರೈನ್ ಓಡಿಸುವ ಜೊತೆಗೆ ಟ್ರಕ್ ಗಳನ್ನ ಚಲಾಯಿಸುವುದು ಕೂಡ ಸಾಮಾನ್ಯವಾಗಿ ಕಂಡುಬರುತ್ತೆ..
ಇಲ್ಲಿ ನಾಯಿಗಳನ್ನ ಸಾಕುತ್ತಿರುವವರಿಗೆ ವಿಶೇಷವಾದ ಕಾನೂನಿದೆ.. ಹೌದು.. ಇಲ್ಲಿ ಒಂದು ವೇಳೆ ನಾಯಿಗಳನ್ನ ಸಾಕಬೇಕಾದ್ರೆ ಅವುಗಳನ್ನ ಕಟ್ಟಿಹಾಕುವಂತಿಲ್ಲ.. ತೀರ ಮುಖ್ಯವಾದ ಕೆಲಸವಿದ್ದು ನಾಯಿಗಳನ್ನ ಕಟ್ಟಿಹಾಕಲೇ ಬೇಕು ಎನ್ನುವಂತಹ ಪರಿಸ್ಥಿತಿ ಬಂದ್ರೆ ಮಾತ್ರ ಅವುಗಳನ್ನ ಕಟ್ಟಿಹಾಕುವ ಅನುಮತಿಯಿದೆ..
ಮತ್ತೊಂದು ಕಾನೂನು ಅಂದ್ರೆ ಇಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನ ಯಾವುದೇ , ಪ್ರಿಂಟ್ , ಡಿಜಿಟಲ್ , ಅಥವ ಯಾವುದೇ ರೀತಿಯಾದ ಜಾಹಿರಾತುಗಳಲ್ಲಿ ಶಾಮೀಲು ಮಾಡಿಕೊಳ್ಳುವಂತಿಲ್ಲ..
ಇನ್ನೂ ಚಳಿಗಾಲದಲ್ಲಿ ಇಲ್ಲಿ ಕೊರೆಯುವ ನೀರಿನಲ್ಲಿ ಮುಳುಗಿದ್ರೆ ಸದಾ ಖುಷಿಯಾಗಿರುತ್ತೇವೆ ಎಂಬ ನಂಬಿಕೆ ಈ ದೇಶದಲ್ಲಿದೆ.. ಆದ್ರೆ ಇದು ಅಂದವಿಶ್ವಾಸವಲ್ಲ.. ಬದಲಾಗಿ ಇಲ್ಲಿನ ಜನರು ಇದಕ್ಕೆ ವೈಜ್ಞಾನಿಕ ಕಾರಣವನ್ನೂ ಹುಡುಕಿಕೊಂಡಿದ್ಧಾರೆ.. ಹೌದು.. ಚಳಿಗಾಲದಲ್ಲಿ ಕೊರೆಯುವ ತಂಡಿ ನೀರಲ್ಲಿ ಮುಳುಗಿದಾಗ ಮೆದುಳಿನಲ್ಲಿ ಹೆಚ್ಚಾಗಿ ಆಕ್ಸಿಜನ್ ಸರ್ಕ್ಯುಲೇಟ್ ಆಗುತ್ತದೆ.. ಹೀಗಾಗಿ ವರ್ಷಾನುಗಟ್ಟಲೇ ಖುಷಿಯಾಗಿರುತ್ತಾರೆ ಎನ್ನುವ ನಂಬಿಕೆಯಿದೆ..
ಈ ದೇಶದಲ್ಲಿ ವಿಶ್ವದ ಅತಿ ಉದ್ದವಾದ ಟನಲ್ ಇದೆ. ಇದರ ಉದ್ದ ಸುಮಾರು 15 ಮೈಲಿ ಅಂದ್ರೆ ಅಂದಾಜು 25 ಕಿ.ಮೀ.. ಈ ಟನಲ್ ಲಿಡ್ರಲ್ ಪ್ರದೇಶವನ್ನ ಸಂಪರ್ಕಿಸುತ್ತೆ.. ಅಲ್ಲದೇ ಈ ಟನಲ್ ಒಳಗಡೆಯಿಂದ ತುಂಬಾ ಸುಂದರವಾಗಿ ಕಾಣಿಸುತ್ತದೆ ಎನ್ನಲಾಗಿದೆ.. ನಾರ್ವೆಯಲ್ಲಿ ಹೆಲ್ ( ನರಕ ) ಎಂಬ ಚಿಕ್ಕ ನಗರವಿದೆ.. ಆದ್ರೆ ಈ ನಗರಕ್ಕೆ ಭೇಟಿ ನೀಡಿದ ಪ್ರವಾಸಿಗರು ಅಲ್ಲಿನ ರೈಲ್ವೇ ಸ್ಟೇಷನ್ ಬಳಿ ಫೋಟೋ ಕ್ಲಿಕ್ಕಿಸಿಕೊಳ್ಳುವುದನ್ನ ಮಾತ್ರ ಮರೆಯುವುದಿಲ್ಲ..
ಹಾ ಇದನ್ನ ಹೆಲ್ ಎಂದು ಕರೆದಿರೋದಕ್ಕೆ ಕಾರಣವೂ ಇದೆ.. ಈ ಪ್ರದೇಶದ ಸುತ್ತಮುತ್ತ ಬರೀ ಬೆಟ್ಟ ಕಾಡು, ಗುಡ್ಡ , ಗಿಡ ಮರಗಳು , ದಟ್ಟಾರಣ್ಯ ಬಿಡ್ರೆ ಬೇರೇನೂ ಕಾಣುವುದಿಲ್ಲ.. ಅಲ್ಲದೇ ಇಲ್ಲಿ ಚಿತ್ರ ವಿಚಿತ್ರ , ಭಯಾನಕ ಶಬ್ಧಗಳು ಕೇಳಿಸುತ್ತದೆ ಎನ್ನಲಾಗುತ್ತದೆ.
ನಾರ್ವೆ ಜನರಿಗೆ ಓದು ಬರದಲ್ಲಿ ಹೆಚ್ಚು ಆಸಕ್ತಿ. ಹಾಗೆ ನೋಡುದ್ರೆ ಇಲ್ಲಿನ ಜನರು ಹೆಚ್ಚಿನ ಸಮಯವನ್ನ ಲೈಬ್ರರಿಯಲ್ಲೇ ಕಳೆಯುತ್ತಾರೆ.. ಸಂಜೆ ನಂತರ ಬಹುತೇಕರು ಲೈಬ್ರಿಯಲ್ಲೇ ಕಾಲ ಕಳೆಯುತ್ತಾರೆ.. ಅಲ್ಲದೇ ಇಲ್ಲಿನ ಸರ್ಕಾರ ಬರಹಗಾರರಿಗೆ ಪ್ರೇರಣೆ , ಪ್ರೋತ್ಸಾಹ ನೀಡುತ್ತೆ.. ಇಲ್ಲಿ ಬರಹಗಾರರು ಪುಸ್ತಕಗಳನ್ನ ಬರೆದು ಪಬ್ಲಿಶ್ ಮಾಡಿದರೆ ಸರ್ಕಾರವೇ ಆ ಬುಕ್ ಗಳ 1000 ಕಾಪಿಗಳನ್ನ ಖರೀದಿ ಮಾಡುತ್ತಾದೆ.. ಅವುಗಳನ್ನ ವಿವಿಧ ಲೈಬ್ರರಿಗಳಲ್ಲಿ ಇರಿಸಲಾಗುತ್ತದೆ.. ಇಲ್ಲಿನ ಜನಸಂಖ್ಯೆ ಕಡಿಮೆಯಿರೋದ್ರಿಂದ ಅನೇಕ ಪ್ರಯೋಜನಗಳೂ ಇವೆ.. ಇಲ್ಲಿನ ಜನರು ವರ್ಷಪೂರ್ತಿ ಖರ್ಚು ಮಾಡಿದ ಹಣ , ಸಂಪಾದಿಸಿದ ಹಣ , ಎಲ್ಲೆಲ್ಲಿ ಹಣ ಖರ್ಚು ಮಾಡಿದ್ದಾರೆ. ಎಲ್ಲಾ ಮಾಹಿತಿ ಒಂದು ವೆಬ್ ಸೈಟ್ ನಲ್ಲಿ ಲಭ್ಯವಾಗುತ್ತದೆ.
ಚಿಕ್ಕ ದೇಶ ಯಾವಾಗಲೂ ಶ್ರೀಮಂತ ದೇಶವಾಗಿರುತ್ತೆ ಎಂಬುದಕ್ಕೆ ಉತ್ತಮ ಉದಾಹರಣೆ ನಾರ್ವೆ. ಇಲ್ಲಿ ಬಡವರು ತೀರ ಕಡಿಮೆ.. ಪ್ರತಿಯೊಬ್ಬರ ಳೈಫ್ ಸ್ಟೈಲ್ ಇಲ್ಲಿ ಉತ್ತಮವಾಗಿರುತ್ತದೆ.. ಇಲ್ಲಿ ಪ್ರತಿಯೊಬ್ಬರ ಬಳಿಯು ಸ್ವಂತ ಮನೆಗಳಿವೆ.. ಅದು ಅಲ್ದೇ ಎಲ್ಲಾ ಮನೆಗಳು ಕಡಿಮೆಯಂದ್ರು 3 ಬೆಡ್ ರೂಮ್ ಗಳನ್ನ ಹೊಂದಿರುತ್ತವೆ.. ಇಲ್ಲಿ ಯಾರೂ ಕೂಡ ಭಿಕ್ಷೆ ಬೇಡುತ್ತಿರುವುದಾಗಲೀ , ರಸ್ತೆಯ ಪಕ್ಕ ಮಲಗಿರುವುದಾಗಲಿ ಕಂಡು ಬರೋದಿಲ್ಲ.
ಈ ದೇಶ ಪ್ರಾಕೃತಿಕ ಸಂಪತ್ತಿನಿಂದ ಕೂಡಿದ್ದು, ಕಾಡು , ಹಸಿರಿನ ಮಹತ್ವ ಗೊತ್ತಿದೆ.. ಹೀಗಾಗಿಯೇ ಇಲ್ಲಿನ ಸರ್ಕಾರ 2008ರಲ್ಲಿ ಅಮೇಜಾನ್ ಕಾಡಿನ ರಕ್ಷಣೆಗಾಗಿ 1 ಬಿಲಿಯನ್ ಡಾಲರ್ ದಾನವಾಗಿ ನೀಡಿತ್ತು. 2016 ರಲ್ಲಿ ನಾರ್ವೆಯಲ್ಲಿ ಎಫ್ ಎಂ ರೇಡಿಯೋವನ್ನ ಸಂಪೂರ್ಣವಾಗಿ ಬ್ಯಾನ್ ಮಾಡಲಾಯ್ತು.. ಈ ರೀತಿ ಎಫ್ ಎಂ ಬ್ಯಾನ್ ಮಾಡಿದ ಮಮೊದಲ ದೇಶವೂ ನಾರ್ವೆ.. ಆದ್ರೆ ಅಲ್ಲಿನ ಸರ್ಕಾರ ಈ ಕ್ರಮ ಕೈಗೊಂಡಿದಕ್ಕೆ ಕಾರಣವೇನು ಅನ್ನೋದು ಮಾತ್ರ ಇಲ್ಲಿಯವರೆಗೂ ನಿಗೂಢವಾಗಿಯೇ ಉಳಿದಿದೆ..
ಇಲ್ಲಿನ ಜನರಲ್ಲಿ ಸ್ಕೀಯಿಂಗ್ ಕ್ರೇಜ್ ಹೆಚ್ಚಾಗಿದೆ.. ಸ್ನೋನಲ್ಲಿ ಸ್ಕೀಯಿಂಗ್ ಮಾಡುವುದನ್ನ ಇಲ್ಲಿನ ಜನರು ಹೆಚ್ಚಾಗಿ ಎಂಜಾಯ್ ಮಾಡ್ತಾರೆ.. ಈ ದೇಶದ ಉತ್ತರ ಭಾಗದಲ್ಲಿ ಜೂಲೈವರೆಗೂ ಕೆಲ ತಿಂಗಳು ಸೂರ್ಯ ಮುಳುಗುವುದಿಲ್ಲ.. ಹೌದು ರಾತ್ರಿ ಸುಮಾರು 12. 23 ನಿಮಿಷಕ್ಕೆ ಸೂರ್ಯ ಮುಳುಗಿ ಮತ್ತೆ 40 ನಿಮಿಷಗಳ ಉದಯಿಸುತ್ತನೆ. ಇದು ಇಲ್ಲಿನ ವಿಶೇಷತೆ.. ಹಾಗೂ ಅದ್ಭುತವೂ ಹೌದು.
ನಾರ್ವೆಯಲ್ಲಿ ಕೊಲೆ ಅಪರಾಧಿಗೆ ಗಲ್ಲ ಶಿಕ್ಷೆ ವಿಧಿಸುವುದಿಲ್ಲ.. ಜೀವಾವಧಿ ಶಿಕ್ಷೆಯನ್ನೂ ವಿಧಿಸುವುದಿಲ್ಲ.. ಇಲ್ಲಿನ ಕಾನೂನಿನ ಪ್ರಕಲಾರ ಅತ್ಯಂತ ಕಠಿಣ ಶಿಕ್ಷೆ ಅಂದ್ರೆ 21 ವರ್ಷ ಜೈಲು ಶಿಕ್ಷೆ.. 21 ವರ್ಷಗಳ ನಂತರ ಬಿಡುಗಡೆ..
ಪ್ರವಾಸಿ ತಾಣಗಳು
ರಾಜಧಾನಿ ಓಸ್ಲೋ – ಇಲ್ಲಿ ಲೇಟ್ ನೈಟ್ ಪಾರ್ಟಿಗಳಿಗೆ ಅನುಮತಿಯಿದೆ… ರಾತ್ರಿ ಪೂರ ಯುವಕರು ಇಲ್ಲಿ ಎಂಜಾಯ್ ಮಾಡ್ತಾರೆ.. ನಾರ್ವೆಯ ದೊಡ್ಡ ಸಿಟಿ ಓಕ್ಲೋದಲ್ಲಿ ಸಾಕಷ್ಟು ತಾಣಗಳಲ್ಲಿ ಪ್ರವಾಸಿಗರು ಸುತ್ತಾಡಬಹುದು, ಎಂಜಾಯ್ ಮಾಡಬಹುದು..
ಹೆಲ್ ( ಹಾಂಟೆಡ್ ಪ್ಯಾಲೇಸ್ ) ಹೆಲ್ ಅಂದ್ರೆ ನರಕ ಎಂದರ್ಥ.. ಆದ್ರೆ ಈ ತಾಣ ಪ್ರವಾಸಿಗರ ಮಧ್ಯೆ ಜನಪ್ರಿಯವಾಗಿದೆ.. ಕಾರಣ ಇಲ್ಲಿನ ಪ್ರಾಕೃತಿಕ ಅದ್ಭುತ ಸೌಂದರ್ಯ , ರಮಣೀಯ ದೃಶ್ಯ.. ದಟ್ಟಾರಣ್ಯದಿಂದ ಬರುವ ಚಿತ್ರ ವಿಚಿತ್ರ ಧ್ವನಿಗಳು ಭಯಪಡಿಸಿದ್ರೂ , ರೋಮಾಂಚನಕಾರಿ ಅನುಭೂತಿ ನೀಡುತ್ತದೆ.. ಲೋಫೋಟೆನ್ ನಾರ್ಲಾಂಡ್ , ಬರ್ಗನ್ , ಸ್ಟವಾಂಜರ್ ರೀಜನ್ ಇನ್ನೂ ಅನೇಕ ಪ್ರವಾಸಿ ತಾಣಗಳು ನಾರ್ವೆಯಲ್ಲಿದೆ..