sameer wankhede – NCB ಅಧಿಕಾರಿ ಸಮೀರ್ ವಾಂಖೇಡೆ ಹುಟ್ಟಿನಿಂದ ಮುಸ್ಲಿಂ ಅಲ್ಲ….
ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಯ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖಡೆ ಅವರನ್ನ ಖುಲಾಸೆಗೊಳಿಸಲಾಗಿದೆ. ಅವರಿಗೆ ಜಾತಿ ಪರಿಶೀಲನಾ ಸಮಿತಿಯಿಂದ ಕ್ಲೀನ್ ಚಿಟ್ ನೀಡಲಾಗಿದೆ.
ಸಮೀರ್ ವಾಂಖಡೆ ನಕಲಿ ಪ್ರಮಾಣ ಪತ್ರ ನೀಡಿ ಸರ್ಕಾರಿ ನೌಕರಿ ಪಡೆದ ಆರೋಪ ಎದುರಿಸುತ್ತಿದ್ದರು. ಈ ಕುರಿತು ವಿಚಾರಣೆ ನಡೆಸಿದ ಜಾತಿ ಪರಿಶೀಲನಾ ಸಮಿತಿ “ಆತ ಹುಟ್ಟಿನಿಂದ ಮುಸ್ಲಿಂ ಅಲ್ಲ, ಹಿಂದೂ ದಲಿತ ಸಮುದಾಯದ ಮಹಾರ್ ಜಾತಿಗೆ ಸೇರಿದವನು” ಎಂದು ಹೇಳಿದೆ. ಮಹಾರಾಷ್ಟ್ರ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ಶುಕ್ರವಾರ ಈ ಕುರಿತು ಆದೇಶ ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸತ್ಯಮೇವ ಜಯತೆ..
ಜಾತಿ ಪರಿಶೀಲನಾ ಸಮಿತಿ ತಾನು ಹುಟ್ಟಿನಿಂದ ಮುಸಲ್ಮಾನನಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದಕ್ಕೆ ವಾಂಖೆಡೆ ಸಂತಸ ವ್ಯಕ್ತಪಡಿಸಿದರು. ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದಾರೆ. ಮುಂಬೈ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯು ವಾಂಖೆಡೆ ವಿರುದ್ಧದ ದೂರುಗಳನ್ನು ಪರಿಶೀಲಿಸಿ ಅದೇ ದಿನ ಆದೇಶ ಹೊರಡಿಸಿದೆ.
ವಾಂಖೆಡೆ ಮತ್ತು ಅವರ ತಂದೆ ಜ್ಞಾನದೇವ್ ವಾಂಖೆಡೆ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡಿಲ್ಲ ಮತ್ತು ಇಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರು ಮತ್ತು ಮೆಹರ್ -37 ವರ್ಗಕ್ಕೆ ಸೇರುತ್ತಾರೆ ಎಂದು ಸಮಿತಿಯು ಆದೇಶದಲ್ಲಿ ತಿಳಿಸಿದೆ. ನವಾಬ್ ಮಲಿಕ್ ಮತ್ತು ಇತರರು ಸಲ್ಲಿಸಿದ್ದ ಜಾತಿ ದೂರಿನಲ್ಲಿ ಯಾವುದೇ ಸತ್ಯಾಂಶ ಇಲ್ಲದ ಕಾರಣ ಅದನ್ನು ತಿರಸ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಅಕ್ಟೋಬರ್ 2021 ರಲ್ಲಿ, ಮುಂಬೈ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿದ ನಂತರ ವಾಂಖೆಡೆ ಹೆಸರು ಬೆಳಕಿಗೆ ಬಂದಿತು. ಈ ದಾಳಿಯಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಇತರ 19 ಮಂದಿಯನ್ನು ಬಂಧಿಸಲಾಗಿದ್ದು, ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಆರ್ಯನ್ ಖಾನ್‌ಗೆ ಎನ್‌ಸಿಬಿ ಕ್ಲೀನ್ ಚಿಟ್ ನೀಡಿತು.
‘Not a Muslim by birth’: Ex-NCB officer Sameer Wankhede gets clean-chit