ಬೆಂಗಳೂರು : ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ ಸಿಎಲ್ ಮುಖ್ಯ ಮಾಹಿತಿಯನ್ನು ನೀಡಿದ್ದು, ಇಂದು ರಾಷ್ಟ್ರೀಯ ವಿದ್ಯಾಲಯ ರಸ್ತೆ ಹಾಗೂ ಯಲಚೇನಹಳ್ಳಿ ನಿಲ್ದಾಣದ ನಡುವಣ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ ಸಿ ಎಲ್ ತಿಳಿಸಿದೆ.
ವಿಸ್ತರಿಸಿದ ರೀಚ್-೪ ಸಂಬಂಧ ಯೆಲಚೇನಹಳ್ಳಿ ವಿದ್ಯುತ್ ಸ್ವೀಕರಿಸುವ ಉಪಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅಂಜಾನಪುರ ನಿಲ್ದಾಣದವರೆಗೆ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವ ಕೆಲಸವನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಂಡಿದೆ. ಈ ಕಾರಣಕ್ಕೆ ಆರ್‌ವಿ ರಸ್ತೆ ಮತ್ತು ಯಲಚೇನಹಳ್ಳಿ ನಿಲ್ದಾಣದವರೆಗಿನ ಹಸಿರು ಮಾರ್ಗದಲ್ಲಿ ಇಂದು ಯಾವುದೇ ಮೆಟ್ರೋ ರೈಲುಗಳು ಓಡಾಡುವುದಿಲ್ಲ.
ನಾಗಸಂದ್ರದಿಂದ ಆರ್ ವಿ ರಸ್ತೆವರೆಗೆ ಮೆಟ್ರೋ ಸೇವೆ ಎಂದಿನಂತೆ ಇರಲಿದೆ . ಇನ್ನು ಬೈಯಪ್ಪನಹಳ್ಳಿ – ಮೈಸೂರು ರಸ್ತೆವರೆಗಿನ ನೇರಳ ಮಾರ್ಗದಲ್ಲಿಯೂ ಎಂದಿನಂತೆ ಮೆಟ್ರೋ ಸೇವೆ ಇರಲಿದೆ ಎಂದು ಮಾಹಿತಿ ನೀಡಲಾಗಿದೆ.








