ಟೆನಿಸ್ – 400 ವಾರಗಳಿಂದ ನಂಬರ್ ವನ್ ಸ್ಥಾನದಲ್ಲಿರುವ ನೊವಾಕ್ ಜಾಕೊವಿಕ್
ಟೆನಿಸ್ ಜಗತ್ತಿನಲ್ಲಿ ಸರ್ಬಿಯಾದ ನೊವಾಕ್ ಜಾಕೋವಿಕ್ ಈ ಹಿಂದೆ ಯಾರು ಮಾಡಿರದ, ಮುಂದೆ ಯಾರು ಕೂಡ ಮಾಡದಂತಹ ಅತ್ಯದ್ಭುತವಾದ ಸಾಧನೆಯೊಂದನ್ನು ಮಾಡಿದ್ದಾರೆ.
18 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ನೊವಾಕ್ ಜಾಕೊವಿಕ್ ಸದ್ಯ ವಿಶ್ವದ ನಂಬರ್ ವನ್ ಆಟಗಾರ. ಆದ್ರೆ ಜಾಕೋವಿಕ್ ಈ ನಂಬರ್ ವನ್ ಸ್ಥಾನವನ್ನು ಕಾಯ್ದುಕೊಂಡು ಬಂದಿರೋದು ಇಂದು ನಿನ್ನೆಯಿಂದಲ್ಲ.
ಹೌದು, ಕಳೆದ 400 ವಾರಗಳಿಂದ ಅಂದ್ರೆ ಸುಮಾರು ನಾಲ್ಕು ವರ್ಷಗಳಿಂದ ನೊವಾಕ್ ಜಾಕೊವಿಕ್ ಅವರು ನಂಬರ್ ವನ್ ಸ್ಥಾನವನ್ನು ಯಾರಿಗೂ ಕೂಡ ಬಿಟ್ಟುಕೊಟ್ಟಿಲ್ಲ. ಮುಂದೆ ಬಿಟ್ಟುಕೊಟ್ರೂ ಕೂಡ ಅದನ್ನು ಈ ಮಟ್ಟಕ್ಕೆ ಕಾಯ್ದುಕೊಳ್ಳುವುದು ಅಸಾಧ್ಯ.
ಈ ಹಿಂದೆ ಸ್ವಿಜರ್ಲೆಂಡ್ ರೋಜರ್ ಫೆಡರರ್ ಅವರು 311ವಾರಗಳ ಕಾಲ ನಂಬರ್ ವನ್ ಸ್ಥಾನದಲ್ಲಿದ್ದರು. ಆದ್ರೆ ಜಾಕೊವಿಕ್ ಆ ದಾಖಲೆಯನ್ನು ಅಳಿಸಿಹಾಕಿ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.
#Novak Djokovic # Rafael Nadal #Roger Federer #saakshatv #tennis
ವಿಶ್ವ ಟೆನಿಸ್ ನಲ್ಲಿ ಕಳೆದ 15 ವರ್ಷಗಳಿಂದ ಕೇಳಿಬರುತ್ತಿರುವುದು ಬರೀ ಮೂರು ಹೆಸರುಗಳು ಮಾತ್ರ. ರೋಜರ್ ಫೆಡರರ್, ನೊವಾಕ್ ಜಾಕೊವಿಕ್ ಮತ್ತು ರಫೆಲ್ ನಡಾಲ್. ಅದು ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಾಗಿರಲಿ, ಎಟಿಪಿ ಟೂರ್ನಿಯಾಗಿರಲಿ, ಫೈನಲ್ ನಲ್ಲಿ ಈ ಮೂವರ ಪೈಕಿ ಒಬ್ಬರಂತೂ ಇದ್ದೇ ಇರುತ್ತಾರೆ. ಅಷ್ಟರ ಮಟ್ಟಿಗೆ ಬಿಗ್ ಥ್ರಿಗಳು ವಿಶ್ವ ಟೆನಿಸ್ ಆಟವನ್ನು ಆಳುತ್ತಿದ್ದಾರೆ.
ಅಷ್ಟೇ ಅಲ್ಲ, ಕಳೆದ 68 ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳ ಪ್ರಶಸ್ತಿಯನ್ನು ಈ ಮೂವರೇ ಹಂಚಿಕೊಂಡಿದ್ದಾರೆ. ಬೇರೆಯವರಿಗೆ ಬಿಟ್ಟುಕೊಟ್ಟಿರುವುದು ಕೇವಲ 11 ಬಾರಿ ಮಾತ್ರ.
ನೊವಾಕ್ ಜಾಕೊವಿಕ್ 18 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆದ್ರೆ, ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ತಲಾ 20 ಗ್ರ್ಯಾಂಡ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಈ ಪೈಕಿ ಫೆಡರರ್ ಅವರು ಒಟ್ಟು 31 ಬಾರಿ ಫೈನಲ್ ಹಾಗೂ 46 ಬಾರಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ರಫೆಲ್ ನಡಾಲ್ 28 ಬಾರಿ ಫೈನಲ್ ಹಾಗೂ 34 ಬಾರಿ ಸೆಮಿಫೈನಲ್ ತಲುಪಿದ್ದಾರೆ.
ಹಾಗೇ ನೊವಾಕ್ ಜಾಕೊವಿಕ್ 28 ಬಾರಿ ಫೈನಲ್ ಹಾಗೂ 39 ಬಾರಿ ಸೆಮಿಫೈನಲ್ ಎಂಟ್ರಿಯಾಗಿದ್ದರು.
ಒಟ್ಟಿನಲ್ಲಿ ಕಳೆದ 15-20 ವರ್ಷಗಳಿಂದ ಟೆನಿಸ್ ಜಗತ್ತಿನಲ್ಲಿ ಪಾರುಪತ್ಯ ಸ್ಥಾಪಿಸಿರುವ ಈ ತ್ರಿಮೂರ್ತಿಗಳಿಗೆ ಪ್ರಾಯ ಆಗಿರುವುದು ದೇಹಕ್ಕೆ ಹೊರತು ಆಟಕ್ಕಲ್ಲ ಎಂಬುದು ಅಷ್ಟೇ ಸತ್ಯ.
#Novak Djokovic # Rafael Nadal #Roger Federer #saakshatv #tennis