ಪ್ಯಾನ್ ಕಾರ್ಡ್ ಕಳೆದು ಹೋದರೆ ಚಿಂತಿಸಬೇಡಿ – ಸುಲಭವಾಗಿ ಡೌನ್ ಲೋಡ್ ಮಾಡಿಕೊಳ್ಲೀ ಇ -ಪ್ಯಾನ್
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಥವಾ ಬ್ಯಾಂಕ್ ನ ಪ್ರಮುಖ ಕೆಲಸಗಳಿಗೆ ಪ್ಯಾನ್ ಕಾರ್ಡ್ ಕಡ್ಡಾಯ. ತೆರಿಗೆ ರಿಟರ್ನ್ ಸಲ್ಲಿಸುವಾಗ ಅಥವಾ ಇನ್ಯಾವುದೇ ಕೆಲಸಗಳಿಗೆ ಪ್ಯಾನ್ ಕಾರ್ಡ್ ಬೇಕಿರುತ್ತೆ, ಆದರೆ ಗೊಂದಲದಲ್ಲಿ ಕಳೆದುಕೊಂಡುಬಿಡುತ್ತೀರಿ ಅಂತಿಟ್ಟುಕೊಳ್ಳಿ ಅಥವಾ ಪ್ಯಾನ್ ಕಾರ್ಡ್ ಹಾನಿಗೊಳಗಾಗಿ ಬಿಟ್ಟಿರುತ್ತದೆ. ಮುಂದೇನು ? ಎಂಬ ಚಿಂತೆ ನಿಮಗಿದ್ದರೆ ಚಿಂತಿಸಬೇಡಿ.
ನೀವು ಪ್ಯಾನ್ ಕಾರ್ಡ್ ಕಳೆದುಕೊಂಡರೆ ಸುಲಭವಾಗಿ ಇ-ಪ್ಯಾನ್ ಅನ್ನು ಹೇಗೆ ಡೌನ್ಲೋಡ್ ಮಾಡಬಹುದು ಎಂಬುದನ್ನು ನಾವು ತಿಳಿಸಿಕೊಡ್ತೀವಿ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ಪ್ಯಾನ್ ಕಾರ್ಡ್ಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಆನ್ಲೈನ್ನಲ್ಲಿ ತ್ವರಿತ ಪ್ಯಾನ್ ನೀಡುವ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಸೌಲಭ್ಯವನ್ನು ಜುಲೈ 24 ರಿಂದ ಪ್ರಾರಂಭಿಸಲಾಗಿದೆ, ಇದು ಸಂಪೂರ್ಣವಾಗಿ ಉಚಿತ. ಆನ್ಲೈನ್ ಇ-ಪ್ಯಾನ್ ಅನ್ನು ಕೆಲವೇ ನಿಮಿಷಗಳಲ್ಲಿ ಡೌನ್ಲೋಡ್ ಮಾಡಬಹುದು.
ಇ-ಪ್ಯಾನ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ
- ಇ-ಪ್ಯಾನ್ ಡೌನ್ಲೋಡ್ ಮಾಡಲು, ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್, incometax.gov.in ಗೆ ಹೋಗಿ.
- ನಂತರ ಇ-ಪ್ಯಾನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ Get New e-PAN ಮೇಲೆ ಸೆಲೆಕ್ಟ್ ಮಾಡಿ.
- ಈಗ ಓಪನ್ ಆಗಿರುವ ನೀಡಿರುವ ವಿಂಡೋದಲ್ಲಿ, ನೀವು ಪ್ಯಾನ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
- ಇದರ ನಂತರ, Terms and Conditions ಆಯ್ಕೆಯನ್ನ ಅಕ್ಸೆಪ್ಟ್ ಮಾಡಿ.
- ಈ ಪ್ರಕ್ರಿಯೆಯನ್ನ ಕ್ಲಿಕ್ ಮಾಡಿದಾಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
- OTP ಸಂಖ್ಯೆಯನ್ನ ನಮೂದಿಸಿದ ನಂತರ ವಿವರಗಳನ್ನು ಪರಿಶೀಲಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ಇದರ ನಂತರ ಇ-ಪ್ಯಾನ್ ಕಾರ್ಡ್ನ PDF ಅನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಈಗ ಇ-ಪ್ಯಾನ್ನ PDF ಅನ್ನು ಡೌನ್ಲೋಡ್ ಮಾಡಿಕೊಳ್ಳಿ