ಇಡೀ ವಿಶ್ವದಾದ್ಯಂತ ತಲ್ಲಣ ಮೂಡಿಸಿರುವ ಕಿಲ್ಲರ್ ಕೊರೊನಾ ತನ್ನ ಅಟಟಹಾಸ ಮುಂದುವರೆಸುತ್ತಲೇ ಬಂದಿದೆ. ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1.53 ಕೋಟಿ ದಾಟಿದ್ದು, ಒಟ್ಟು ಸಾವಿನ ಸಂಖ್ಯೆ 6.30 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನೂ ಇಡೀ ವಿಶ್ವದಲ್ಲಿ ದಿನೇ ದಿನೇ ಗುಣಮುಖರ ಸಂಖ್ಯೆಯಲ್ಲೂ ಕ್ರಮೇಣವಾಗಿ ಏರಿಕೆಯಾಗ್ತಿದ್ದು, ಸುಮಾರು 93.54 ಲಕ್ಷಕ್ಕೂ ಹೆಚ್ಚು ರೋಗಿಗಳು ಚೇತರಿಸಿಕೊಂಡಿದ್ದಾರೆ. ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 53.94 ಲಕ್ಷವಿದೆ. ಇನ್ನೂ ಸಾವಿರಾರು ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆಯಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಇನ್ನೂ ಕೊರೊನಾ ಹಾಟ್ ಸ್ಪಾಟ್ ಗಳಾಗಿರುವ ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ, ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ರಣಕೇಕೆಗೆ ಜನರು ಬೆಚ್ಚಿಬಿದ್ದಿದ್ದಾರೆ.
ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...








