ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರನ ಅಬ್ಬರ ಮುಂದುವರಿದಿದ್ದು, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆಯ ಅವಧಿಯಲ್ಲಿ ರಾಜ್ಯದಲ್ಲಿ ಮತ್ತೆ 8 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 701ಕ್ಕೆ ಏರಿಕೆ ಕಂಡಿದೆ. ಇಂದು ದಾವಣಗೆರೆಯಲ್ಲಿ 3, ಕಲಬುರಗಿಯಲ್ಲಿಯೂ 3 ಹಾಗೂ ಬೆಳಗಾವಿ ಮತ್ತು ಬೆಂಗಳೂರು ನಗರದಲ್ಲಿ ತಲಾ 1 ಜನರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇಂದು 18 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದನ್ನು ಸೇರಿ, ರಾಜ್ಯದಲ್ಲಿ ಒಟ್ಟು 363 ಜನರು ಕೊರೊನಾ ಸೋಂಕು ಮುಕ್ತವಾಗಿದ್ದಾರೆ. ಇನ್ನು ದಾವಣಗೆರೆಯಲ್ಲಿ ಮತ್ತೊಬ್ಬ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಒಟ್ಟು 30 ಜನರು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಒಬ್ಬ ಸೋಂಕಿತನೂ ಸೇರಿ ಒಟ್ಟು 31 ಸೋಂಕಿತರು ಸಾವನ್ನಪ್ಪಿದಂತಾಗಿದೆ.
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್ ಪತ್ತೆ
ದಾವಣಗೆರೆ -03
ಕಲಬುರಗಿ -03
ಬೆಂಗಳೂರು ನಗರ-01
ಬೆಳಗಾವಿ -01