ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರನ ಆರ್ಭಟ ಜೋರಾಗಿದ್ದು, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ 53 ಜನರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 50ರ ಗಟಿದಾಟಿದ್ದು, ಬೆಳಗವಾವಿ ಒಂದರಲ್ಲೇ 28 ಜನರಲ್ಲಿ ಸೋಂಕು ದೃಢವಾಗಿದೆ. ಅಲ್ಲದೇ ಗ್ರೀನ್ ಝೋನ್ ಆಗಿದ್ದ ಶಿವಮೊಗ್ಗಕ್ಕೂ ಕೊರೊನಾ ಬರಸಿಡಿಲು ಬಡೆದಿದ್ದು 8 ಜನರಲ್ಲಿ ಸೋಂಕು ದೃಢವಾಗಿದೆ.
ಇನ್ನು ರಾಜ್ಯದಲ್ಲಿ ಇಂದು 19 ಜನರು ಗುಣಮುಖರಾಗಿದ್ದು, ಒಟ್ಟು 305 ಜನರು ಕೊರೊನಾ ಸೋಂಕು ಮುಕ್ತವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕೊರೊನಾ ಸೋಂಕಿನಿಂದಾಗಿ ಬೆಂಗಳೂರಲ್ಲಿ 56 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿನ ಕಾರಣದಿಂದಾಗಿ ಒಟ್ಟು 31 ಜನರು ಸಾವನ್ನಪ್ಪಿದ್ದರೆ, ಆತ್ಮಹತ್ಯೆ ಮಾಡಿಕೊಂಡ ಒಬ್ಬ ಸೋಂಕಿತನೂ ಸೇರಿ ಒಟ್ಟು 32 ಸೋಂಕಿತರು ಸಾವನ್ನಪ್ಪಿದಂತಾಗಿದೆ.
ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್ ಪತ್ತೆ
ಬೆಳಗಾವಿ-22
ಶಿವಮೊಗ್ಗ-08
ಬಾಗಲಕೋಟೆ- 08
ಉತ್ತರ ಕನ್ನಡ (ಭಟ್ಕಳ)- 07
ಕಲಬುರಗಿ -03
ಬೆಂಗಳೂರು ನಗರ- 03
ಚಿಕ್ಕಬಳ್ಳಾಪುರ -01
ದಾವಣಗೆರೆ-01








