Kozhikode : ಬಲವಂತವಾಗಿ ಮದ್ಯ ಕುಡಿಸಿ ಸ್ನೇಹಿತರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ….
ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಬಲವಂತವಾಗಿ ಮದ್ಯ ಕುಡಿಸಿ ಇಬ್ಬರು ಸ್ನೇಹಿತರು ಅತ್ಯಾಚಾರ ಎಸಗಿರುವ ಘಟನೆ ಶನಿವಾರ ರಾತ್ರಿ ಕೇರಳದ ಕೋಝಿಕ್ಕೋಡ್ನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಗಲಾಟೆ ಮಾಡುತ್ತಿದ್ದುದನ್ನ ಕಾಲೇಜು ಅಧಿಕಾರಿಗಳು ಗಮನಿಸಿದಾಗ ವಿಷಯ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಗೆ ಕೌನ್ಸೆಲಿಂಗ್ ನಡೆಸಿದಾಗ ವಿಷಯವನ ಬಹಿರಂಗಪಡಿಸಿದ್ದಾಳೆ. ನಂತರ ಕೋಝಿಕ್ಕೋಡ್ನ ಕಸಬಾ ಪೊಲೀಸರಿಗೆ ದೂರು ನೀಡಲಾಗಿದೆ.
ಕೇರಳದ ಎರ್ನಾಕುಲಂ ಮೂಲದ ನರ್ಸಿಂಗ್ ವಿದ್ಯಾರ್ಥಿಯನ್ನು ಇಬ್ಬರು ಆರೋಪಿಗಳು ತಮ್ಮ ಬಾಡಿಗೆ ಮನೆಗೆ ಆಹ್ವಾನಿಸಿದ್ದಾರೆ. ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಅಮಲೇರಿದ ಸ್ಥಿತಿಯಲ್ಲಿದ್ದಾಗ ಇಬ್ಬರೂ ಸ್ನೇಹಿತರು ಅತ್ಯಚಾರ ಎಸಗಿದ್ದಾರೆ.
ನಂತರ ನರ್ಸಿಂಗ್ ವಿದ್ಯಾರ್ಥಿನಿಯನ್ನ ಮನೆಯಲ್ಲಿಯೇ ಬಿಟ್ಟು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಜ್ಞೆ ಮರಳಿದ ನಂತರ, ವಿದ್ಯಾರ್ಥಿನಿ ತನ್ನ ಸ್ನೇಹಿತನಿಗೆ ತಿಳಿಸಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.
Nursing student forced to consume alcohol, gang-raped by friends in Kozhikode