ODI Ranking : ಭಾರತಕ್ಕೆ ನಂ.1 ಆಗಲು ಅವಕಾಶ
ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಬೆನ್ನಲ್ಲೆ ಟೀಮ್ ಇಂಡಿಯಾ ಏಕದಿನ ರಾಂಕಿಂಗ್ನಲ್ಲಿ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದೆ.
ಬಿಡುಗಡೆಯಾಗಿರುವ ಐಸಿಸಿ ಏಕದಿನ ರಾಂಕಿಂಗ್ನಲ್ಲಿ ನ್ಯೂಜಿಲೆಂಡ್ ನಂ.1 ಪಟ್ಟದಿಂದ ಕೆಳಗಿಳಿದಿದ್ದು ಎರಡನೆ ಸ್ಥಾನದಲ್ಲಿದೆ. ನಾಳೆ ಇಂದೋರ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಪಡೆ ಮೂರನೆ ಪಂದ್ಯ ಗೆದ್ದರೆ ಏಕದಿನ ರ್ಯಾಂಕಿಂಗ್ನಲ್ಲಿ ನಂ.1ಸ್ಥಾನಕ್ಕೇರಲಿದೆ.
ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಭಾರತ ಕ್ರಿಕೆಟ್ ತಂಡ ಒಟ್ಟು 113 ಅಂಕಗಳನ್ನು ಪಡೆದಿವೆ. ಸದ್ಯ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದು ಭಾರತ 3ನೇ ಸ್ಥಾನದಲ್ಲಿದೆ.
ರೋಹಿತ್ ಪಡೆಗೆ ಇದೀಗ ಮೂರು ಆವೃತ್ತಿಗಳಲ್ಲೂ ನಂ.1 ಆಗಲು ಅವಕಾಶ ಲಭಿಸಿದೆ. ಟೆಸ್ಟ್ನಲ್ಲಿ ಭಾರತ 267 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಟೆಸ್ಟ್ನಲ್ಲಿ 115 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 126 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 11 ಅಂಕಗಳ ಹಿನ್ನಡೆ ಅನುಭವಿಸಿರುವ ಭಾರತ ಮುಂಬರುವ ಟೆಸ್ಟ್ ಸರಣಿಯಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇರಲಿದೆ.
ODI Ranking , india got chance to be number 1








