ಔತಣಕೂಟದಲ್ಲಿ ನಾನ್ ವೆಜ್ ಇಲ್ಲದಕ್ಕೆ ವಧು ಬಿಟ್ಟು ಬೇರೊಬ್ಬಳಿಗೆ ತಾಳಿ ಕಟ್ಟಿದ..!
ಒಡಿಶಾ : ಒಡಿಶಾದಲ್ಲಿ ನಡೆದಿರುವ ವಿಚಿತ್ರ ಹಾಗೂ ಕ್ಷುಲ್ಲಕ ಕಾರಣಕ್ಕೆ ವರನೊಬ್ಬ ವಧುವನ್ನೇ ಬಿಟ್ಟು ಬೇರೊಬ್ಬಳ ಜೊತೆಗೆ ವಿವಾಹವಾಗಿರೋ ಘಟನೆ ನಡೆದಿದೆ.. ಹೌದು ಒಡಿಶಾದ ಮನತಿರಾ ಎಂಬ ಗ್ರಾಮದಲ್ಲಿ ಔತಣ ಕೂಟದಲ್ಲಿ ಮಟನ್ ಊಟ ಹಾಕಿಸಿಲ್ಲವೆಂದು ಸಿಟ್ಟಿಗೆದ್ದ ವರ, ವಧುವಿನ ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ್ದಾನೆ.. ಮದುವೆ ಕ್ಯಾನ್ಸಲ್ ಮಾಡುವ ನಿರ್ದಾರ ತೆಗೆದುಕೊಂಡಾಗ ಹುಡುಗಿಯ ಮನೆಯ ಕಡೆಯವರು ಎಷ್ಟೇ ಗೋಗರೆದರೂ ವರ ಮಾತ್ರ ಸಿಟ್ಟು ಕಡಿಮೆಯಾಗದೇ ಅದೇ ಗ್ರಾಮದ ಬೇರೊಬ್ಬಳಿಗೆ ತಾಳಿ ಕಟ್ಟಿದ್ದಾನೆ..
ರಮಾಕಾಂತ್ ಪತ್ರಾ ಎಂಬಾತ ಈ ರೀತಿ ಹುಚ್ಚಾಟ ಮಾಡಿದ್ದಾನೆ. ಮದುವೆ ಶಾಸ್ತ್ರಕ್ಕೂ ಮುನ್ನ ಔತಣ ಕೂಡ ಏರ್ಪಡಿಸಲಾಗಿತ್ತು. ವರನ ಕಡೆಯವರು ಈ ಔತಣ ಕೂಟದಲ್ಲಿ ಮಟನ್ ಊಟ ತಯಾರು ಮಾಡುವಂತೆ ವಧುವಿನ ಕಡೆಯವರಿಗೆ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ಮಟನ್ ಊಟ ರೆಡಿ ಮಾಡಿರಲಿಲ್ಲ. ಹೀಗಾಗಿ ವರ ಅಲ್ಲಿಯೇ ಮದುವೆ ಕ್ಯಾನ್ಸಲ್ ಮಾಡಿದ್ದಾನೆ. ಅದೇ ಗ್ರಾಮದ ಯುವತಿಯೊಬ್ಬಳ ಜೊತೆ ಮದುವೆಯಾಗಿದ್ದಾನೆ.