ಬೆಳಗಾವಿ: ಪೊಲೀಸ್ ಠಾಣೆಯಲ್ಲಿಯೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ್ದು, ಅಮಾನತು ಮಾಡಲಾಗಿದೆ.
ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ(Ankali police station)ಯಲ್ಲಿ ಈ ಕುರಿತು ಆರೋಪ ಕೇಳಿ ಬಂದಿತ್ತು. ಠಾಣೆಯ ಮುಂದೆ ಮದ್ಯದ ಬಾಟಲಿ ಹಾಗೂ ಟೇಬಲ್ ಮೇಲೆ ಮದ್ಯದ ಬಾಟಲಿ ಇರುವ ಫೋಟೋಗಳಗಳು ವೈರಲ್ ಆಗಿದ್ದವು.
ಇದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅಂಕಲಿ ಠಾಣೆ ಹೆಡ್ ಕಾನ್ಸ್‌ಟೇಬಲ್ ರಾಮಚಂದ್ರ ಖೋತ ಅವರನ್ನು ಅಮಾನತು ಮಾಡಿ ಎಸ್ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ.