ಭಾರತದ ಮಾರುಕಟ್ಟೆಯಲ್ಲಿ 1 ಲಕ್ಷ ಎಲೆಕ್ಟ್ರಿಕ್ ಸ್ಕೂಟಿ ಮಾರಿದ ಓಕಿನಾವಾ
ಓಕಿನಾವಾ ಕಂಪನಿ ತನ್ನ ಹೈ-ಸ್ಪೀಡ್ ಮತ್ತು ಲೋ – ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ, 1 ಲಕ್ಷ ಗಾಡಿಗಳನ್ನ ಮಾರಾಟ ಮಾಡಲು ಯಶಸ್ವಿಯಾಗಿದೆ.
ಭಾರತದಲ್ಲಿ ಸ್ಥಳೀಯವಾಗಿ ತಯಾರಿಸಲಾದ ಜನಪ್ರಿಯ iPraise+ ಮತ್ತು Praise Pro ಸ್ಕೂಟರ್ಗಳಿಂದ 1 ಲಕ್ಷದ ಮಾರಾಟದ ಮೈಲಿಗಲ್ಲು ಮುಟ್ಟಲಾಗಿದೆ ಎಂದು ಕಂಪನಿ ಹೇಳಿದೆ.
ಓಕಿನಾವಾ ಕಂಪನಿಯು ಭಾರತದಲ್ಲಿ ಸುಮಾರು 400 ಡೀಲರ್ಶಿಪ್ಗಳಿಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ, ಇದರಲ್ಲಿ ಮೆಟ್ರೋ ನಗರಗಳು ಸೇರಿದಂತೆ 2 ಮತ್ತು 3 ಶ್ರೇಣಿಯ ದೇಶದ ಮಾರುಕಟ್ಟೆಗಳು ಸೇರಿವೆ.
ಒಕಿನಾವ Praise Pro ಸ್ಕೂಟರಗಳ ಬೆಲೆ ಇಂಡಿಯಾದಲ್ಲಿ 79,845 ರುಪಾಯಿ ಇದೆ. iPraise+ ಮಾಡೆಲ್ ನ ಬೆಲೆ 1.5 ಲಕ್ಷ ರುಪಾಯಿ ಇದೆ.