ಸ್ವಾತಂತ್ರ್ಯ ದಿನಾಚರಣೆಗೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಓಲಾ ಇ ಸ್ಕೂಟರ್ಸ್ – ವಿಶೇಷತೆಗಳೇನು..?
ನವದೆಹಲಿ : ಭಾರತದಲ್ಲಿ ಆಗಸ್ಟ್ 15 ರಂದು ಅಂದ್ರೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಹುನಿರೀಕ್ಷೆಯ ಓಲಾ ಇ ಸ್ಕೋಟರ್ ಬಿಡುಗಡೆಯಾಗುತ್ತಿದೆ.. ಈ ವಿಚಾರವನ್ನ ಅಧಿಕೃತವಾಗಿ ಇಂದು ಓಲಾ ಎಲೆಕ್ಟ್ರಿಕ್ ಬಹಿರಂಗಪಡಿಸಿದೆ. ಅಧಿಕೃತವಾಗಿ ಬಾರತದಲ್ಲಿ ಲಾಂಚ್ ಆಗುವ ಮುನ್ನವೇ ಈ ಬೈಕ್ ಗೆ ಬಹು ಬೇಡಿಕೆಯಿದೆ.. ಓಲಾ ಇ-ಸ್ಕೂಟರ್ ಅನ್ನು 499 ರೂ.ಗಳ ಮರುಪಾವತಿ ಮೊತ್ತದಲ್ಲಿ ಬುಕಿಂಗ್‌ಗಾಗಿ ತೆರೆಯಲಾಗಿದೆ ಮತ್ತು ಇಲ್ಲಿಯವರೆಗೆ, ಕಂಪನಿಯು ದೇಶಾದ್ಯಂತ 1,000 ನಗರಗಳಿಂದ ಬುಕಿಂಗ್‌ಗಳನ್ನು ಸ್ವೀಕರಿಸಿದೆ.
ಪೆಟ್ರೋಲ್ ಬೆಲೆ ಏರಿಕೆಯ ನಡುವ ಇದು ಜನಸ್ನೇಹಿ ಸ್ಕೂಟರ್ ಆಗಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತ ಪಡಿಸಿದೆ. ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಾವೇಶ್ ಅಗರ್ವಾಲ್ ಕೇವಲ 17 ಸೆಕೆಂಡ್ ಗಳ ವೀಡಿಯೊವೊಂದನ್ನು ತಮ್ಮ ಎಲ್ಲಾ ಸಾಮಾಜಿಕ ಜಾಲಗತಾಣಗಳಲ್ಲಿ ಹಂಚಿಕೊಂಡಿದ್ದರು, ಹಲವು ದ್ವೀಚಕ್ರ ವಾಹನ ಪ್ರಿಯರ ಗಮನ ಸೆಳೆದಿತ್ತು. 2021 ಜುಲೈ 15 ರಂದು ಆರ್ಡರ್ ಸ್ವೀಕರಿಸಲು ಕಂಪನಿ ಆರಂಭಿಸಿತ್ತು. ಅದಾದ 24 ಗಂಟೆಯೊಳಗೇ ಆರ್ಡರ್ ಮಾಡಿದವರ ಸಂಖ್ಯೆ 1 ಲಕ್ಷ ದಾಟಿತ್ತು. ಈ ಮೂಲಕ ಲಾಂಚ್ ಆಗುವುದಕ್ಕೂ ಮುನ್ನವೇ ಅತಿ ಹೆಚ್ಚು ಬುಕಿಂಗ್ ಆದ ವಾಹನಗಳಾಗಿವೆ..
ಸದ್ಯಕ್ಕೆ ಸಂಸ್ಥೆ ಸ್ಕೂಟರ್ ನ ನಿಗದಿತ ಬೆಲೆಯನ್ನು ಬಹಿರಂಗ ಪಡಿಸಿಲ್ಲ. ಮಾರುಕಟ್ಟೆಯ ತಜ್ಞರ ಪ್ರಕಾರ ಸ್ಕೂಟರ್ ಬೆಲೆ ಅಂದಾಜು 80,000-85,000 ಆಗಿರಬಹುದು ಎಂದು ಹೇಳಲಾಗುತ್ತಿದೆ. ಓಲಾ ಸ್ಕೂಟರ್ ಮೇಲೆ ಸಬ್ಸಿಡಿಯನ್ನೂ ನೀಡಲಿದೆ. ಆದರೆ, ಅಂದಾಜು ಬೆಲೆ ಸಬ್ಸಿಡಿಯೊಂದಿಗೆ ಇರುತ್ತದೆಯೇ ಅಥವಾ ಸಬ್ಸಿಡಿಯನ್ನು ಈ ಬೆಲೆಯಲ್ಲಿ ಮಾತ್ರ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿ ಇನ್ನೂ ತಿಳಿದಿಲ್ಲ.
ವಿಶೇಷತೆಗಳು..!
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 10 ಬಣ್ಣಗಳ ಆಯ್ಕೆಗಳಲ್ಲಿ ನೀಡಲಾಗುವುದು.
ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಕ್ಲೌಡ್ ಬೇಸ್ಡ್ ಕನೆಕ್ಟಿವಿಟಿ, 12 ಇಂಚಿನ ಟ್ಯೂಬ್ ಲೆಸ್ ಟೈರ್ ಗಳನ್ನು ಹೊಂದಿದೆ.
ಅಲೋಯ್ ವೀಲ್, ಎಲ್ ಇಡಿ ಹೆಡ್, ಟೈಲ್ ಲ್ಯಾಂಪ್ ಮತ್ತು ಟರ್ನ್ ಸಿಗ್ನಲ್ ಗಳನ್ನು ಹೊಂದಿದೆ. ಅಂಡರ್ ಸೀಟ್ ಸ್ಟೋರೇಜ್ 50 ಲೀಟರ್ ಇದೆ.
ಇದರ ಗರಿಷ್ಠ ವೇಗ ಗಂಟೆಗೆ 90 ಕಿಮೀ
ಓಲಾ ಇ-ಸ್ಕೂಟರ್ ಒಮ್ಮೆ ಚಾರ್ಜ್ ಮಾಡಿದರೇ 150 ಕಿಮೀ ತನಕ ಚಲಿಸಬಹುದಾಗಿದೆ
ಹೋಮ್ ಚಾರ್ಜರ್‌ನೊಂದಿಗೆ ಸ್ಕೂಟರ್ ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಮನೆಯಲ್ಲಿ ಅಳವಡಿಸಲಾಗಿರುವ ಸಾಮಾನ್ಯ ಸಾಕೆಟ್ ನಿಂದಲೇ ಸ್ಕೂಟರ್ ನನ್ನು ಚಾರ್ಜ್ ಮಾಡಬಹುದಾಗಿದೆ. 18 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸ್ಮಾರ್ಟ್ ಫೋನ್ ಸಂಪರ್ಕವು ಲಭ್ಯವಾಗಿರಲಿದೆ.
ಇನ್ನು, ದೇಶದ 400 ಪ್ರಮುಖ ನಗರಗಳಲ್ಲಿ 1,00,000 ಸ್ಥಳಗಳಲ್ಲಿ ಅಥವಾ ಟಚ್ ಪಾಯಿಂಟ್ ಗಳಲ್ಲಿ ಹೈಪರ್ ಚಾರ್ಜರ್ ಕೇಂದ್ರವನ್ನು ಸ್ಥಾಪಿಸಲಿದ್ದು, ಮಾಹಿತಿಯು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ ಎಂದು ಕೂಡ ಸಂಸ್ಥೆ ಮಾಹಿತಿ ನೀಡಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ 3.6 kWh ಬ್ಯಾಟರಿ ಸಾಮರ್ಥ್ಯದೊಂದಿಗೆ ಬರುವ ನಿರೀಕ್ಷೆಯಿದೆ, ಇದು ಸ್ಕೂಟರ್ ಅನ್ನು FAME-II ಸಬ್ಸಿಡಿಗೆ ಅರ್ಹವಾಗಿಸುತ್ತದೆ.
ಈ ಸ್ಕೂಟರ್ ಸುಮಾರು 1,860 ಮಿಮೀ ಉದ್ದ, 700 ಎಂಎಂ ಅಗಲ ಮತ್ತು 1,155 ಎಂಎಂ ಎತ್ತರವಿದೆ..








