ಹಳೆ ಟೈಯರ್ಸ್ ಬೇಕಾಗಿವೆ.. ಆ ದೇಶದಲ್ಲಿ ಅವು ಬಂಗಾರವಾಗಿವೆ

1 min read
black-gold saaksha tv

ಹಳೆ ಟೈಯರ್ಸ್ ಬೇಕಾಗಿವೆ.. ಆ ದೇಶದಲ್ಲಿ ಅವು ಬಂಗಾರವಾಗಿವೆ

ದೇಶದಿಂದ ದೇಶಕ್ಕೆ ಬಂಗಾರ ಬೆಲೆ ವ್ಯತ್ಯಾಸ ಇರುತ್ತದೆ. ನಾವು ಹತ್ತಿಯನ್ನು ಬಿಳಿ ಚಿನ್ನ ಮತ್ತು ಕಲ್ಲಿದ್ದಲು ಕಪ್ಪು ಚಿನ್ನ ಎಂದು ಕರೆಯುತ್ತೇವೆ. ಆದರೆ ನೈಜೀರಿಯಾದಲ್ಲಿ ಬಳಸಿದ ಟೈರ್‍ಗಳು ಕಪ್ಪು ಚಿನ್ನಕ್ಕೆ ತಿರುಗಿವೆ. ಈಗ ಅವುಗಳಿಗೆ ಅಲ್ಲಿ ಫುಲ್ ಡಿಮ್ಯಾಂಡ್ ಇದೆ.

ಇಫಿಡೆಲಾಪೆ ರಾನ್ಸೆವ್ ಎಂಬ ನೈಜೀರಿಯಾದ ಉದ್ಯಮಿ, ಪ್ರಿಟನ್ ವೇಸ್ಟ್ ಮ್ಯಾನೇಜ್ ಮೆಂಟ್ ರಿಸೈಕಲಿಂಗ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಎರಡು ವರ್ಷಗಳ ಹಿಂದೆ ಒಂದು ಶೇಡ್ ನಲ್ಲಿ ಈ ಕಂಪನಿ ಶುರುವಾಗಿತ್ತು. ರಸ್ತೆ ಬದಿ, ಕಸದ ರಾಶಿ, ಚರಂಡಿ ಕಾಲುವೆಗಳಲ್ಲಿ ಬಿದ್ದಿರುವ ಹಳೆಯ ಟೈರ್‍ಗಳನ್ನು ಸಂಗ್ರಹಿ, ಅವುಗಳನ್ನು ತಮ್ಮ ಮರುಬಳಕೆ ಘಟಕಕ್ಕೆ ತಂದು ಪೇವ್ಮೆಂಟ್ ಬ್ರಿಕ್ಸ್ ಆಗಿ ತಯಾರು ಮಾಡುತ್ತಿದ್ದರು.

black-gold saaksha tv

ಈ ಬ್ರಿಕ್ಸ್ ಗಳನ್ನು ರಸ್ತೆಗಳು, ಉದ್ಯಾನವನಗಳು ಮತ್ತು ಶಾಲಾ ಆವರಣದಲ್ಲಿ ಬಳಸಿಕೊಳ್ಳಲು ಅಲ್ಲಿನ ಜನತೆ ಆಸಕ್ತಿ ತೋರಿದ್ದರು. ಇದರೊಂದಿಗೆ ಆಕೆಯ ಕಂಪನಿಗೆ ಆರ್ಡರ್‍ಗಳು ಒಮ್ಮೆಲೇ ಹರಿದು ಬಂದವು.ಅದು ಯಾವ ಮಟ್ಟಿಗೆ ಅಂದರೇ ಹಳೆಯ ಯಂತ್ರಗಳ ಬದಲಿಗೆ ಹೊಸ ಯಂತ್ರಗಳನ್ನು ಅಳವಡಿಸಿದರೂ ಬೇಡಿಕೆಗೆ ಅನುಗುಣವಾಗಿ ಇಟ್ಟಿಗೆಗಳನ್ನು ಬ್ರಿಕ್ಸ್ ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ಇದರೊಂದಿಗೆ ಎರಡು ವರ್ಷದಲ್ಲಿ ನಾಲ್ಕ ಜನರಿಂದ ಆರಂಭವಾದ ಸಂಸ್ಥೆ ಈಗ 128 ಮಂದಿ ಕೆಲಸ ಮಾಡುವ ಕಂಪನಿಯಾಗಿದೆ.

ಕೇವಲ ಬಿಕ್ಸ್‍ಗಳನ್ನು ಮಾತ್ರ ವಲ್ಲದೇ ಹಲವಾರು ಇತರ ಉತ್ಪನ್ನಗಳನ್ನು ಈ ಕಂಪನಿ ತಯಾರಿಸುತ್ತಿದೆ. ಅವರು ನಡೆಸುವ ಸ್ಥಾವರಕ್ಕೆ ಹಳೆಯ ಟೈರ್‍ಗಳು ಸಾವಿರಗಟ್ಟಲೇ ಬಂದು ಬೀಳುತ್ತಿವೆ. ಅವರು ಪ್ರತಿ ಟೈರ್‍ಗೆ 0.20 ಡಾಲರ್ ಪಾವತಿಸುತ್ತಾರೆ. ಪರಿಣಾಮವಾಗಿ, ಕರೊನಾದಿಂದ ಕೆಲಸ ಕಳೆದುಕೊಂಡವರು ಇದೀಗ ಹಳೆ ಟೈರ್ ಗಳ ಬೇಟಿಯಲ್ಲಿ ನಿರತರಾಗಿದ್ದಾರೆ. ಎಲ್ಲೆಲ್ಲಿ ಟೈರ್ ಸಿಕ್ಕರೂ ರಾಶಿ ಹಾಕಿ ಈ ಸ್ಥಾವರಕ್ಕೆ ತರುತ್ತಾರೆ. ರಾನ್ಸೆವ್ ಅವರ ಯಶಸ್ಸಿನ ಕುರಿತು ರಾಯಿಟರ್ಸ್ ವಿಶೇಷ ಲೇಖನವನ್ನು ಪ್ರಸಾರ ಮಾಡಿದ್ದು, ಹಳೆಯ ಟೈರ್‍ಗಳು ಕಪ್ಪು ಚಿನ್ನ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd