Adipurush | ಆದಿಪುರುಷ್ ಟೀಸರ್ ಟ್ರೋಲ್ ಬಗ್ಗೆ ನಿರ್ದೇಶಕ ಹೇಳಿದ್ದೇನು ?
ಭಾರಿ ನಿರೀಕ್ಷೆಗಳೊಂದಿಗೆ ಅಕ್ಟೋಬರ್ 2 ರಂದು ರಿಲೀಸ್ ಆದ ಆದಿಪುರುಷ್ ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾಕಷ್ಟು ಮಂದಿ ” ಇದೊಂದು ಟೀಸರಾ.. ಕಾರ್ ಟೂನ್ ರೀತಿಯಲ್ಲಿದೆ” ಎಂದು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಸಾಮಾನ್ಯರಷ್ಟೆ ಅಲ್ಲದೇ ರಾಜಕೀಯ ಪ್ರಮುಖರು ಕೂಡ ಟೀಸರ್ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ.
ರಾಮಾಯಣವನ್ನು ಅಧ್ಯಯನ ಮಾಡದೇ ನಿರ್ದೇಶನ ಓಂರೌತ್ ಆದಿಪುರುಷ್ ಮೂವಿಯಲ್ಲಿ ಪಾತ್ರಗಳನ್ನು ಬದಲಾವಣೆ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆದಿಪುರುಷ್ ಟೀಸರ್ ಅನ್ನು ಟ್ರೋಲ್ ಮಾಡುತ್ತಿದ್ದಾರೆ.
ಈ ಟ್ರೋಲಿಂಗ್ ಬಗ್ಗೆ ನಿರ್ದೇಶಕ ಓಂರೌತ್ ಮಾತನಾಡಿದ್ದು, ಟೀಸರ್ ರಿಲೀಸ್ ಆದಾಗಿನಿಂದಲೂ ಬರುತ್ತಿರುವ ಪ್ರತಿಕ್ರಿಯೆಗಳು ನನ್ನಲ್ಲಿನ ಧೈರ್ಯವನ್ನು ಕಡಿಮೆ ಮಾಡಿರುವುದು ಸಹಜ.

ಆದ್ರೆ ಈ ಟ್ರೋಲಿಂಗ್ ಅನ್ನು ನೋಡಿ ನನಗೆ ಅಚ್ಚರಿ ಆಗುತ್ತಿಲ್ಲ. ಯಾಕೆಂದರೇ ಈ ಸಿನಿಮಾ ಬಿಗ್ ಸ್ಕ್ರೀನ್ ಗಾಗಿ ತೆಗೆದಿರುವ ಸಿನಿಮಾ. ಮೊಬೈಲ್ ಫೋನ್ ನಲ್ಲಿ ನೋಡಲು ಅಲ್ಲ ಎಂದು ಹೇಳಿದ್ದಾರೆ.
ಕೇವಲ ಕೆಲವರಿಗಾಗಿ ಈ ಸಿನಿಮಾ ಮಾಡಿಲ್ಲ. ಥಿಯೇಟರ್ ಗಳಿಂದ ದೂರವಾಗಿರುವವರಿಗಾಗಿ, ಎಲ್ಲೋ ಮೂಲೆಯಲ್ಲಿರುವ ಜನರನ್ನು ಥಿಯೇಟರ್ ಗಳಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡಿದ್ದೇವೆ.
ಯಾಕೆಂದರೆ ಇದು ರಾಮಾಯಣ. ಗ್ಲೋಬಲ್ ಕಂಟೆಂಟ್ ಕೇಳುತ್ತಿರುವ ಜನರೇಷನ್ ಅನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ತೆಗೆಯಲಾಗಿದೆ.
ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ. ಅದಕ್ಕಾಗಿಯೇ ನಾನು 3ಡಿ ಮೋಷನ್ ಕ್ಯಾಪ್ಟರ್ ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಓಂ ರೌತ್ ಹೇಳಿದ್ದಾರೆ.