ಭಾರತದಲ್ಲಿ ಒಮಿಕ್ರಾನ್ 3ನೇ ಪ್ರಕರಣ ಪತ್ತೆ Omicron saaksha tv
ನವದೆಹಲಿ : ಕೊರೊನಾ ಸೋಂಕಿನ ಕರಿ ನೆರಳಿನ ಮಧ್ಯೆ ದೇಶಕ್ಕೆ ಒಮಿಕ್ರಾನ್ ಸೋಂಕು ವಕ್ಕರಿಸಿದೆ.
ರಾಜ್ಯದಲ್ಲಿ ಎರಡು ಪ್ರಕರಣಗಳು ಪತ್ತೆಯಾದ ಬಳಿಕ ಇದೀಗ ಗುಜರಾತ್ ನಲ್ಲಿ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ.
ಇದರೊಂದಿಗೆ ದೇಶದಲ್ಲಿ ಮೂರು ಒಮಿಕ್ರಾನ್ ಪ್ರಕರಣಗಳು ಪತ್ತೆಯಾದಂತೆ ಆಗಿದೆ.
ಜಿಂಬಾಬ್ವೆಯಿಂದ ಜಾಮ್ನಗರಕ್ಕೆ ವಾಪಸ್ ಆಗಿದ್ದ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಕಮಿಷನರ್ ಜೈ ಪ್ರಕಾಶ್ ದೃಢಪಡಿದ್ದಾರೆ.
ಡಿಸೆಂಬರ್ 2 ರಂದು ಬೆಂಗಳೂರಿನ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಕಾಣಿಸಿಕೊಂಡಿತ್ತು.
ಇನ್ನು ಈ ಒಮಿಕ್ರಾನ್ ಸೋಂಕು ಕೊರೊನಾ ವೈರಸ್ ಗಿಂತಲೂ ಅತಿ ವೇಗದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಹಿನ್ನೆಲೆಯಲ್ಲಿ ದೇಶಕ್ಕೆ ಹೊರ ರಾಷ್ಟ್ರಗಳಿಂದ ಬರುವವರ ಮೇಲೆ ನಿಗಾ ಇಡಲಾಗಿದೆ.









