ಒಮಿಕ್ರಾನ್ ಆತಂಕ | ಬಿಕೋ ಎನ್ನುತ್ತಿವೆ ಮೈಸೂರು ಪ್ರವಾಸಿತಾಣಗಳು Mysore saaksha tv
ಮೈಸೂರು : ರಾಜ್ಯದಲ್ಲಿ ಒಮಿಕ್ರಾನ್ ಆತಂಕ ಹೆಚ್ಚಾಗುತ್ತಿದ್ದು, ಮೈಸೂರು ಪ್ರವಾಸಿ ತಾಣಗಳು ಬಿಕೋ ಎನ್ನಲು ಆರಂಭವಾಗಿದೆ.
ಈ ಕುರಿತು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದು, ಮೈಸೂರಿನ ಅರಮನೆಗೆ ಪ್ರತಿದಿನ 10 ರಿಂದ 15 ಸಾವಿರದವರಗು ಪ್ರವಾಸಿಗರು ಭೇಟಿ ನೀಡುತ್ತಿದ್ದರು.
ಒಮಿಕ್ರಾನ್ ಆತಂಕ ಶುರುವಾಯಿತು ಇದೀಗ ಮೈಸೂರು ಪ್ರವಾಸಿತಾಣಗಳು ಮತ್ತೆ ಬಿಕೋ ಎನ್ನಲು ಶುರುವಾಗಿದೆ ಸದ್ಯ ಮೈಸೂರು ಅರಮನೆಗೆ 2 ಸಾವಿರದಷ್ಟು ಮಾತ್ರ ಪ್ರವಾಸಿಗರು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಮೈಸೂರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ. ಅರಮನೆಯಲ್ಲಿ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದೇವೆ.
ಪ್ರವಾಸಿಗರು ಯಾವುದೇ ಆತಂಕ ಪಡಬೇಕಾಗಿಲ್ಲ. ಎಂದಿನಂತೆ ಬಂದು ಅರಮನೆ ನೋಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಮುಂದೆ ಬರುವ ಸರ್ಕಾರದ ಮಾರ್ಗಸೂಚಿಯನ್ನ ಪಾಲಿಸುತ್ತೇವೆ. ಒಮಿಕ್ರಾನ್ ಆತಂಕದಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎಂದು ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.









