ಕೊರೊನಾ ಮಧ್ಯೆ ಒಮಿಕ್ರಾನ್ ಸದ್ದು : ಇವತ್ತು 146 ಕೇಸ್ ಪತ್ತೆ omicron cases in karnataka today update saaksha tv
ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಮೂರನೇ ಅಲೆ ದಿನದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕುಗಳು ರಾಜ್ಯದಲ್ಲಿ ವರದಿಯಾಗುತ್ತಿದ್ದು, ಇದರ ಮಧ್ಯೆ ಮಾಯಾವಿ ಒಮಿಕ್ರಾನ್ ಸೋಂಕು ಕೂಡ ಮೆಲ್ಲನೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ.
ಇಂದು ರಾಜ್ಯದಾದ್ಯಂತ ಕೋವಿಡ್-19 ನ ರೂಪಾಂತರಿ ವೈರಸ್ ಹೊಸದಾಗಿ 146 ಜನರಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 479ಕ್ಕೇರಿದೆ.
ಇತ್ತ ರಾಜ್ಯದಲ್ಲಿ ಇಂದು 11,698 ಹೊಸದಾಗಿ ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 04 ಜನರು ಕೊರೊನಾ ಸೋಂಕಿನಿಂದ ಉಸಿರು ನಿಲ್ಲಿಸಿದ್ದಾರೆ.
ಇಂದು ರಾಜ್ಯಾದ್ಯಂತ 1148 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ರಾಜ್ಯದಲ್ಲಿ 60,148 ಕೇಸ್ ಗಳು ಸಕ್ರಿಯವಾಗಿವೆ.